ವೈದ್ಯಕೀಯ ಕ್ಷೇತ್ರದಲ್ಲಿ ಅಪೂರ್ವ ಸಾಧನಗೈದ ಡಾ|| ಶರಣ ಎಸ್. ಪಾಟೀಲ, ಬೆಂಗಳೂರಿನ ರಾಜೇಶ್ವರಿ ವೈದ್ಯಕೀಯ ಕಾಲೇಜಿನ ಶರೀರ ಶಾಸ್ತ್ತ್ರದ ಅಧ್ಯಾಪಕರಾದ ಡಾ|| ವಸಂತ್ ಕುಲಕರ್ಣಿ ಹಾಗೂ ಶಹಾಪುರದ ಡಾ|| ಗುರುರಾಜ ಅರಕೇರಿ ಅವರು ಈ ಸಾಲಿನ ಡಾ|| ಪಿ.ಎಸ್. ಶಂಕರ್ ಪ್ರತಿಷ್ಠಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬಿಹಾರದ ಚತುರ್ಭುಜ ಲಕ್ಷ್ಮಿಗೆ ಶಸ್ತ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಡಾ|| ಶರಣ ಎಸ್. ಪಾಟೀಲರಿಗೆ ವಿದ್ಯಾಶ್ರೀ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು 10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಹಿರೇಮಠ್ ತಿಳಿಸಿದ್ದಾರೆ.
ಜನವರಿ ಒಂದರಂದು ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಷ್ಟ್ತ್ರಕವಿ ಜಿ.ಎಸ್. ಶಿವರುದ್ರಪ್ಪ ಮತ್ತು ರಾಜ್ಯಸಭಾ ಸದಸ್ಯ ಕೆ.ಬಿ. ಶಾಣಪ್ಪ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
|