ರಾಜ್ಯ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗವು ವಾರದೊಳಗೆ ಸಿದ್ದಪಡಿಸಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ರಾಮಶೇಷನ್ ತಿಳಿಸಿದ್ದಾರೆ.
ಚುನಾವಣಾ ಸಿದ್ದತೆಗಳು ಭರದಿಂದ ಸಾಗುತ್ತಿದ್ದು, ಕಳೆದ ಹತ್ತು ದಿನಗಳಿಂದ ಮನೆ ಮನೆಗೆ ಹೋಗಿ ಹೊಸ ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಿರುವುದಲ್ಲದೆ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಅಧಿಕಾರಿಗಳು ಪರಿಷ್ಕ್ಕತ ಪಟ್ಟಿಯನ್ನು ವಾರದೊಳಗೆ ಸಿದ್ದಪಡಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮತದಾರರ ಅಂತಿಮ ಪಟ್ಟಿಯನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ಇದರಿಂದ ಮತದಾರರು ಹೆಸರು, ಇನ್ನಿತರ ಲೋಪದೋಷಗಳ ನಿವಾರಣೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ನೆರೆಯ ರಾಜ್ಯಗಳ ಚುನಾವಣಾ ಮುಖ್ಯಸ್ಥರನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ವೀಕ್ಷಕರಾಗಿ ನೇಮಿಸಲಾಗಿದ್ದು ಅವರು ಚುನಾವಣಾ ಪ್ರಕ್ರಿಯೆಗಳ ಉಸ್ತುವಾರಿ ವಹಿಸಲಿದ್ದಾರೆ. ರಾಜ್ಯ ಕಚೇರಿಯ ಹಿರಿಯ ಐಎಎಸ್ ಅಧಿಕಾರಿ ಆರ್. ಮನೋಜ್‌ರವರನ್ನು ವಿಶೇಷ ವೀಕ್ಷಕರನ್ನಾಗಿ ನಿಯೋಜಿಸಲಾಗಿದ್ದು, 12 ಐಎಎಸ್ ಅಧಿಕಾರಿಗಳನ್ನು ಜಿಲ್ಲಾವಾರು ವೀಕ್ಷಕರಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
|