ಭಾರತೀಯ ಸಾಹಿತ್ಯಕ್ಕೆ ಸಂಸ್ಕ್ಕತ ಭಾಷೆ ನೀಡಿದ ಕೊಡುಗೆ ಅಪಾರವಾದದ್ದು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸಂಸ್ಕ್ಕತ ಭಾಷಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲರು, ಸಂಸ್ಕ್ಕತದಲ್ಲಿ ರಚಿತವಾದ ಮಹಾಕಾವ್ಯಗಳು ನಮ್ಮ ದೇಶದ ಸಂಸ್ಕ್ಕತಿಯನ್ನು ಬಿಂಬಿಸುತ್ತವೆ.
ಸಂಸ್ಕ್ಕತ ಸಂಸ್ಥಾನದ ಜತೆಗೆ ಮಠ-ಮಂದಿರಗಳು, ಸಂಘ-ಸಂಸ್ಥೆಗಳು ಸಂಸ್ಕ್ಕತ ಭಾಷೆಯ ಪ್ರಸಾರಕ್ಕೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.ಪೇಜಾವರದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿ, ಸಂಸ್ಕ್ಕತ ಭಾಷೆ ಭಾರತೀಯ ಸಂಸ್ಕಾರದ ಕೊಂಡಿಯಾಗಿದೆ.
ನಮಗೆ ಎಲ್ಲ ಭಾಷೆಗಳು ಮುಖ್ಯ. ಆಧುನಿಕ ವಿದ್ಯುತ್ ದ್ವೀಪಗಳ ಸೌಲಭ್ಯದ ಅಗತ್ಯವಿದ್ದರೂ, ಕಮಲ ಅರಳಲು ಸೂರ್ಯನ ಕಿರಣವೇ ಬೀಳಬೇಕು. ಅದೇ ರೀತಿಯಲ್ಲಿ ಭಾರತೀಯ ಸಂಸ್ಕ್ಕತಿ, ಸಂಪ್ರದಾಯ ವಿಕಾಸಗೊಳ್ಳಲು ಸಂಸ್ಕ್ಕತ ಭಾಷೆಯ ಸಾಂಗತ್ಯ ಅಗತ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದಿಂದ ಹೊರಡಿಸಲಾದ ಕೃತಿಗಳನ್ನು ಠಾಕೂರ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ವಿ. ಕುಟುಂಬ ಶಾಸ್ತ್ತ್ರಿ ಉಪಸ್ಥಿತರಿದ್ದರು.
|