ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವರ ಹೆಸರಿನಲ್ಲಿ ಕ್ರೌರ್ಯ ಬೇಡ: ಶಿವಮೂರ್ತಿ ಶ್ರೀ
ಜಗತ್ತಿನಲ್ಲಿ ಇಂದು ಧರ್ಮವು ಕರುಣೆಯನ್ನು ಬಿಟ್ಟು ಕ್ರೌರ್ಯಕ್ಕೆ ಇಳಿದಿರುವುದು ಬಹುದೊಡ್ಡ ಅಪಾಯ ಎಂದು ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಕಳವಳ ವ್ಯಕ್ತಪಡಿಸಿದ್ದಾರೆ.

ಬಸವಕೇಂದ್ರ ತಿಪ್ಪಶೆಟ್ಟಿ ಮಠ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ ಹಾಗೂ ಸಹಜ ಶಿವಯೋಗ -2007 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ದೇವರ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯ ಉಳಿದವುಗಳಿಂತಲೂ ಬಹಳ ಅಪಾಯಕಾರಿ. ಅದಕ್ಕೆ ಕುಮ್ಮಕ್ಕು ನೀಡುವವರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯವಿದೆ ಎಂದು ನುಡಿದರು.

ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ ವಿಷಯದ ಕುರಿತು ಉಪನ್ಯಾಸ ನೀಡಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಜಗತ್ತಿನಲ್ಲಿ ಪ್ರತಿಯೊಂದು ಧರ್ಮವು ಸಮಾನ ಮತ್ತು ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವುದು ಪ್ರತಿಯೊಂದು ಧರ್ಮದ ಕರ್ತವ್ಯ. ಜಗತ್ತಿನಲ್ಲಿ ಶ್ರೇಷ್ಠವಾದ ಧರ್ಮವನ್ನು ಆಯ್ಕೆ ಮಾಡುವ ಅವಕಾಶ ಎಲ್ಲರಿಗೂ ಇದೆ. ಆದರೆ ಅದು ಬಲವಂತದಿಂದಾಗಿರಬಾರದು ಎಂದು ಸಲಹೆ ನೀಡಿದರು.

ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಮಾತನಾಡಿ, ಯಾವ ಧರ್ಮವು ಕ್ರೌರ್ಯವನ್ನು ಉತ್ತೇಜಿಸುವುದಿಲ್ಲ. ಆದರೆ ಜನ ಬಳಸಿಕೊಳ್ಳುವ ರೀತಿಯಲ್ಲಿ ಬದಲಾವಣೆಯಾಗಿದೆ. ಮದರಸಾಗಳು ಭಯೋತ್ಪಾದನೆ ಬೆಳೆಸುವ ಕೇಂದ್ರಗಳು ಎಂಬ ಭಾವನೆ ದೂರವಾಗಬೇಕು. ಸಮಾಜದಲ್ಲಿ ಕಲುಷಿತ ವಾತಾವರಣವನ್ನು ಸೃಷ್ಟಿಸುವವರು ಮತ್ತು ಸಮಾನತೆ ಸಾರುವವರು ಇಬ್ಬರೂ ಇದ್ದಾರೆ ಎಂದು ನುಡಿದರು.


ಈ ಸಂದರ್ಭದಲ್ಲಿ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುದ ಯುವ ಬರಹಗಾರರಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿಶ್ವೇಶ್ವರ ಭಟ್, ಪ್ರಾಧ್ಯಾಪಕ ಡಾ. ಬೈರಮಂಗಲ ರಾಮೇಗೌಡ, ಸಾಮಾಜಿಕ ಕಾರ್ಯಕರ್ತ ಹನುಮಂತ ಮೊದಲಾದವರು ಉಪಸ್ಥಿತರಿದ್ದರು.
ಮತ್ತಷ್ಟು
ಆಮೀಷಕ್ಕೆ ಬಲಿಯಾಗದಿರಲು ಮೋಯಿಲಿ ಕರೆ
ಯಥಾ ಪದ್ದತಿ ಮುಂದುವರಿಸಲು ಕಾಮೇಡ್-ಕೆ ಒಪ್ಪಿಗೆ
ಬಾಜಪದತ್ತ ಎಂ. ಎಸ್. ಪಾಟೀಲ್
ಹೊಸಪೇಟೆಯಲ್ಲಿ ಕಾಂಗ್ರೆಸ್ ಜನಾಂದೋಲನ
ಮಾರುಕಟ್ಟೆ ತಂತ್ರದಿಂದ ಕಾಫಿ ಉದ್ಯಮದ ವಿಸ್ತರಣೆ
ರಾಜ್ಯಪಾಲರಿಗೆ ವರದಿ ಸಲ್ಲಿಸಿದ ಶೋಧನ ಸಮಿತಿ