ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದು-ಮಹದೇವ್ ಜಟಾಪಟಿ: ಚವ್ಹಾಣ್ ಗಮನಕ್ಕೆ
PTI
ಮೈಸೂರಿನ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಂ.ಮಹದೇವ್ ನಡುವೆ ನಡೆದ ಜಟಾಪಟಿ ವಿವರವನ್ನು ಪಕ್ಷದ ರಾಜ್ಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚವ್ಹಾಣ್‌ರವರ ಗಮನಕ್ಕೆ ತರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಯಾವುದೇ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಿ ಚುನಾವಣೆ ಎದುರಿಸಿಲ್ಲ. ಈ ಹಿಂದೆ ಧರಂಸಿಂಗ್ ತಮ್ಮ ಮುಂದಿನ ಸಿ.ಎಂ.ಎಂದು ತಾವು ಹೇಳಿದ್ದರೆ ಅದಕ್ಕೆ ತಮ್ಮಿಬ್ಬರ ನಡುವಿರುವ ಸ್ನೇಹ ಕಾರಣ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ನ ಬಂಡಾಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ವರು ಕಾಂಗ್ರೆಸ್ಸಿಗೆ ಬರುವುದಾದಲ್ಲಿ ಅವರಿಗೆ ಸ್ವಾಗತವಿದೆ. ಜನವರಿ 2ನೇ ವಾರದ ವೇಳೆಗೆ ಸೋನಿಯಾ ಗಾಂಧಿಯವರೊಂದಿಗೆ ಈ ವಿಷಯ ಕುರಿತು ಚರ್ಚೆ ನಡೆಯಲಿದೆ ಎಂದು ಖರ್ಗೆ ತಿಳಿಸಿದರು.

ಸಿದ್ದರಾಮಯ್ಯ ಹಾಗೂ ಮಹದೇವ್ ನಡುವೆ ನಡೆದ ಜಟಾಪಟಿ ಪಕ್ಷಕ್ಕೆ ಒಂದು ಎಚ್ಚರಿಕೆ ಗಂಟೆಯಾಗಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದು ನುಡಿದ ಖರ್ಗೆ ಕಾಂಗ್ರೆಸ್ ಪ್ರಚಾರಾಂದೋಲನ ಸಭೆಗೆ ಮಾಧ್ಯಮಗಳಲ್ಲಿ ಸೂಕ್ತ ಪ್ರಚಾರ ಸಿಗದಿರುವುದರ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಮತ್ತಷ್ಟು
ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ
ದೇವರ ಹೆಸರಿನಲ್ಲಿ ಕ್ರೌರ್ಯ ಬೇಡ: ಶಿವಮೂರ್ತಿ ಶ್ರೀ
ಆಮೀಷಕ್ಕೆ ಬಲಿಯಾಗದಿರಲು ಮೋಯಿಲಿ ಕರೆ
ಯಥಾ ಪದ್ದತಿ ಮುಂದುವರಿಸಲು ಕಾಮೇಡ್-ಕೆ ಒಪ್ಪಿಗೆ
ಬಾಜಪದತ್ತ ಎಂ. ಎಸ್. ಪಾಟೀಲ್
ಹೊಸಪೇಟೆಯಲ್ಲಿ ಕಾಂಗ್ರೆಸ್ ಜನಾಂದೋಲನ