ಅಲೋಪತಿ ವೈದ್ಯಕೀಯ ಪದ್ಧತಿಗೆ ಅದನ್ನೇ ಬೆಂಬಲಿಸುವ ಕೃಪಾಪೋಷಕ ಮಂಡಳಿಯಿದೆ. ಆದರೆ ಹೋಮಿಯೋಪತಿ ವೈದ್ಯ ಪದ್ಧತಿಗೆ ಇದರ ಅಗತ್ಯವಿಲ್ಲ, ಸ್ವಂತ ಬಲದ ಮೇಲೆ ಅದು ಬೆಳೆಯುತ್ತಿದೆ ಎಂದು ಖ್ಯಾತ ವೈದ್ಯ ಡಾ.ಬಿ.ಟಿ.ರುದ್ರೇಶ್ ತಿಳಿಸಿದ್ದಾರೆ.
ಇಲ್ಲಿ ನಡೆದ ಹೋಮಿಯೋಪತಿ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಕುರಿತು ನಡೆಯುತ್ತಿರುವ ಅಪಪ್ರಚಾರದ ಹಿಂದೆ ಅಲೋಪತಿ ಔಷಧ ಕಂಪನಿಗಳ ಮಾಫಿಯಾದ ಕೈವಾಡವಿದೆ ಎಂದು ಆರೋಪಿಸಿದರು.
ಈಗ ಹೃದ್ರೋಗದ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆಯೇ ಹೊರತು ಕ್ಯಾನ್ಸರ್ ಮೊದಲಾದ ಇತರ ಕಾಯಿಲೆಗಳ ಚಿಕಿತ್ಸೆಯೆಡೆ ಆಸಕ್ತಿ ತೋರಿಸುತ್ತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿನ ತಂತ್ರಜ್ಞಾನ ಪ್ರಗತಿ ಯಾವುದೇ ವೈದ್ಯಕೀಯ ಪದ್ಧತಿಗೆ ಸೇರಿಲ್ಲ. ಯಾವುದೇ ವೈದ್ಯ ಈ ಉಪಕರಣಗಳನ್ನು ಕಂಡುಹಿಡಿದಿಲ್ಲ ಎಂದು ನುಡಿದ ರುದ್ರೇಶ್ ಇದು ಕೇವಲ ತಂತ್ರಜ್ಞಾನದ ಬೆಳವಣಿಗೆ ಎನಿಸಿಕೊಳ್ಳುತ್ತದೆಯೇ ಹೊರತು ವೈದ್ಯಕೀಯ ಪದ್ಧತಿಯ ಬೆಳವಣಿಗೆ ಅಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
|