ಜನವರಿ 15ರ ವೇಳೆಗೆ ಕೆಪಿಸಿಸಿ ಪುನರ್ ರಚನೆಯಾಗಲಿದೆ. ಆದರೆ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಂಕ್ರಾಂತಿಯ ವೇಳೆಗೆ ನೂತನ ಪದಾಧಿಕಾರಿಗಳ ನೇಮಕವಾಗಲಿದೆ. ಆ ಸಮಯದಲ್ಲಿ ಸಿದ್ದರಾಮಯ್ಯನವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬೀದರ್, ಗುಲ್ಬರ್ಗಾ ಜಿಲ್ಲೆಗಳಲ್ಲಿ ಅಭಿವೃದ್ದಿ ಕಾರ್ಯಗಳೇ ನಡೆದಿಲ್ಲ ಎಂದು ಹೇಳಿರುವ ಸದಾನಂದ ಗೌಡರಿಗೆ ಮತಿಭ್ರಮಣೆಯಾದಂತಿದೆ ಎಂದು ಗೇಲಿ ಮಾಡಿದ ಧರಂಸಿಂಗ್ ಕಾಂಗ್ರೆಸ್ ಮುಖಂಡರ ಕ್ಷೇತ್ರಗಳ ಕುರಿತು ಟೀಕೆ ಮಾಡಿರುವ ಸದಾನಂದ ಗೌಡರ ಕ್ಷೇತ್ರದಲ್ಲಿಯೇ ಒಂದು ಅಂಗನವಾಡಿ ಕೇಂದ್ರ ಇಲ್ಲ. ಮೊದಲು ಈ ತಪ್ಪನ್ನು ಅವರು ಸರಿಪಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಆಂತರಿಕ ಕಲಹ ಗಗನಕ್ಕೇರಿರುವ ಬಿಜೆಪಿಯಲ್ಲಿ ಸದಾನಂದ ಗೌಡರ ಪದಚ್ಯುತಿಯ ಯತ್ನಗಳು ನಡೆದಿವೆ. ಸದಾನಂದ ಗೌಡರು ಮೊದಲು ಅದನ್ನು ಭದ್ರಪಡಿಸಿಕೊಳ್ಳಲಿ ಎಂದು ಧರಂಸಿಂಗ್ ಗೇಲಿ ಮಾಡಿದರು.
|