ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಟಿ ಲೂಟಿಮಾಡಿದವರು ನಿಮಗೆ ಬೇಕೆ?
News RoomNEWS ROOM
"ಕೋಟಿ ಲೂಟಿ ಮಾಡಿದವರು ನಿಮಗೆ ಬೇಕೆ?" ಗದಗದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನದಲ್ಲಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಖರ್ಗೆ ಜನರಿಗೆ ಕೇಳಿದ ಪ್ರಶ್ನೆಯಿದು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, 20 ತಿಂಗಳ ಬಿಜೆಪಿ - ಜೆಡಿ(ಎಸ್) ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.

ಈ ಅಲ್ಪಾವಧಿಯಲ್ಲಿ ಈ ಸರ್ಕಾರದ ಸಾಧನೆ ಶೂನ್ಯ ಎಂದು ಕುಟುಕಿದರು. ಸಾಧನೆಗಳ ಬಗ್ಗೆ ಮಾತನಾಡುವ ಈ ನಾಯಕರುಗಳು ತಮ್ಮ ಕಾರ್ಯಾವಧಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಸೊಲ್ಲೇಕೆ ಎತ್ತುತ್ತಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದರು.

ವೇದಿಕೆಯ ಮೇಲಿದ್ದ ಸಿದ್ದರಾಮಯ್ಯ ಎಂದಿನಂತೆ ತಮ್ಮ ವ್ಯಂಗ್ಯ ಮಾತುಗಳಿಂದ ಬಿಜೆಪಿ - ಜೆಡಿ(ಎಸ್) ಸಮ್ಮಿಶ್ರ ಸರ್ಕಾರವನ್ನು ಲೇವಡಿ ಮಾಡಿದರು. ಸ್ವಾಮಿ, ಸಮ್ಮಿಶ್ರ ಸರ್ಕಾರ ಬಿದ್ದಿದ್ದು ಬಿಜೆಪಿಯವರು ಹೇಳಿಕೊಂಡು ತಿರುಗುತ್ತಿರುವಂತೆ ಮುಖ್ಯಮಂತ್ರಿ ಪದವಿಗಾಗಿ ಅಲ್ಲ.

ದುಡ್ಡಿಗಾಗಿ ಎಲ್ಲಾ ದುಡ್ಡು ಮಾಡೋದಕ್ಕಾಗಿ. ದುಡ್ಡು ತಿನ್ನೋದರಲ್ಲಿ ನೀನೆಷ್ಟು, ನಾನೆಷ್ಟು ಅಂತ ಕಚ್ಚಾಡ್ಕೊಂಡೇ ಅಧಿಕಾರ ಕಳ್ಕೊಂಡ್ರು. ಅವರ ಕಿತ್ತಾಟಕ್ಕೆ ನಾವ್ಯಾಕೆ ಕಾರಣ ಅಗ್ತೀವಿ? ಎಂದು ಬಹಿರಂಗ ಸವಾಲೆಸೆದರು. ಸಮಾರಂಭದಲ್ಲಿ ಕಾಗೋಡು ತಿಮ್ಮಪ್ಪ, ರಾಣಿ ಸತೀಷ್ ಮುಂತಾದವರು ಭಾಗವಹಿಸಿದ್ದರು.
ಮತ್ತಷ್ಟು
ಅಭಿವೃದ್ಧಿ ಶುಲ್ಕ ಹೆಚ್ಚಿಸಿದರೆ ಪ್ರತಿಭಟನೆ
ಅಭಿವೃದ್ಧಿಯ ಸೋಗಿನ ಕೋಮುವಾದ ಅಪಾಯಕಾರಿ
ಜನಸಮುದಾಯಕ್ಕೆ ಅರಸು ಆದರ್ಶ: ಪ್ರಕಾಶ್
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ: ಧರಂಸಿಂಗ್
ನಿಗೂಢ ಕೊಲೆಗಳ ಪಾತಕಿ ಸೆರೆ
ಸ್ವಂತ ಬಲದ ಹೋಮಿಯೋಪತಿ : ಡಾ. ಬಿ.ಟಿ.ರುದ್ರೇಶ್