ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮಸೇತು ವಿವಾದ ಹುಟ್ಟಿಹಾಕಿದ್ದು ಎನ್.ಡಿ.ಎ.
ರಾಮಸೇತು ವಿವಾದ ಹುಟ್ಟಿ ಹಾಕಿದ್ದು ಎನ್.ಡಿ.ಎ. ಹೊರತು ಯುಪಿಎ. ಅಲ್ಲ ಎಂದು ಜನಾರ್ಧನ ಪೂಜಾರಿ ಕಟುವಾಗಿ ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಮಸೇತು ವಿವಾದ ಕೋತಿ ತಾನು ತಿಂದು ಮೊಸರನ್ನವನ್ನು ಮೇಕೆ ಬಾಯಿಗೆ ಒರೆಸಿದಂತಾಗಿದೆ ಎಂದು ವಿಶ್ಲೇಷಿಸಿದರು.

ರಾಮಸೇತು ಯೋಜನೆಗೆ ಅನುಮೋದನೆ ನೀಡಿದ್ದು ಅಂದಿನ ವಾಜಪೇಯಿ ನೇತೃತ್ವದ ಎನ್‌ಡಿಎ. ಸರ್ಕಾರ. ಯೋಜನೆ ಅನುಮೋದಿಸುವಾಗ ರಾಮಸೇತುವಿನ ಹಿನ್ನೆಲೆ ಮುನ್ನೆಲೆ ಗೊತ್ತಿರಲಿಲ್ಲವೇ? ಈಗ ಯುಪಿಎ ಸರ್ಕಾರ ಅಧಿಕಾರದಲ್ಲಿದೆಯೆಂದಾಕ್ಷಣ ಅದರ ಮೇಲೆ ಗೂಬೆ ಕೂಡಿಸುವುದು ಸರಿಯೇ? ಎಂದು ಪ್ರಶ್ನಿಸಿದರು.

ರಾಮಸೇತು ಯೋಜನೆ ಎನ್.ಡಿ.ಎ. ಕೂಸು ಅವರು ಅರ್ಧಕ್ಕೆ ಮಾಡಿ ಬಿಟ್ಟ ಕೆಲಸವನ್ನು ನಾವು ಪೂರ್ಣಗೊಳಿಸುತ್ತಿದ್ದೇವೆ ಅಷ್ಟೆ. ಅವರುಗಳು ಹೇಳುವಂತೆ ನಮ್ಮದೇನು ವಿವಾದ ಹುಟ್ಟು ಹಾಕುವ ಕೆಲಸವಲ್ಲ.

ತಮ್ಮ ಕಾರ್ಯಾವಧಿಯಲ್ಲಿ ತಾವು ಯೋಜನೆಗೆ ಮಂಜೂರ ಮಾಡಿಲ್ಲವೆಂದು ಎನ್‌ಡಿಎ ನಾಯಕರು ಬಹಿರಂಗವಾಗಿ ಹೇಳಲಿ ನೋಡೋಣ, ನಾನು ರಾಜಕೀಯದಿಂದಲೇ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಸವಾಲೆಸೆದರು.
ಮತ್ತಷ್ಟು
ಕೋಟಿ ಲೂಟಿಮಾಡಿದವರು ನಿಮಗೆ ಬೇಕೆ?
ಅಭಿವೃದ್ಧಿ ಶುಲ್ಕ ಹೆಚ್ಚಿಸಿದರೆ ಪ್ರತಿಭಟನೆ
ಅಭಿವೃದ್ಧಿಯ ಸೋಗಿನ ಕೋಮುವಾದ ಅಪಾಯಕಾರಿ
ಜನಸಮುದಾಯಕ್ಕೆ ಅರಸು ಆದರ್ಶ: ಪ್ರಕಾಶ್
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ: ಧರಂಸಿಂಗ್
ನಿಗೂಢ ಕೊಲೆಗಳ ಪಾತಕಿ ಸೆರೆ