ರೇವಣ್ಣ ಎರಡು ಬಾರಿ ಸಚಿವರಾಗಿ ಸಾಕಷ್ಟು ಕೆಲಸ ಮಾಡಿರುವ ಉತ್ತಮ ನಾಯಕರು. ಅವರು ಬೆಟ್ಟವಾದರೆ ನಾನು ಬಡ ರೈತ. ಅವರ ಸವಾಲು ಸ್ವೀಕರಿಸುವ ಎತ್ತರಕ್ಕೆ ನಾನಿನ್ನೂ ಬೆಳೆದಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಜಿ.ಟಿ.ದೇವೇಗೌಡರಿಗೆ ತಾಕತ್ತಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಮಾಜಿ ಸಚಿವ ರೇವಣ್ಣ ಹಾಕಿರುವ ಸವಾಲಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ರೇವಣ್ಣ ತಮ್ಮೊಳಗಿನ ಸತ್ಯವನ್ನು ನನ್ನ ಕ್ಷೇತ್ರದ ಜನರೆದುರಿಗೇ ತೆರೆದಿಟ್ಟಿರುವುದಕ್ಕಾಗಿ ಅಭಿನಂದಿಸುತ್ತೇನೆ ಎಂದು ನುಡಿದರು.
ಮುಂಬರುವ ಚುನಾವಣೆಯಲ್ಲಿ ತಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಸಿ ಹುಣಸೂರು ಕ್ಷೇತ್ರದಿಂದ ಚಿಕ್ಕಮಾದು ಅವರಿಗೆ ಟಿಕೆಟ್ ನೀಡಬೇಕೆನ್ನುವುದು ರೇವಣ್ಣನವರ ಬಯಕೆಯಾಗಿತ್ತು ಎಂದು ಜಿ.ಟಿ.ದೇವೇಗೌಡ ನುಡಿದರು.
ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಬೇಕೆಂಬ ಅಸೆ ರೇವಣ್ಣನವರಲ್ಲಿದ್ದರೂ ಈ ಹಿಂದೆ ಅರಣ್ಯ ಸಚಿವರಾಗಿದ್ದ ಡಿ.ಟಿ.ಜಯಕುಮಾರ್ ಅದಕ್ಕೆ ಅವಕಾಶ ನೀಡಿರಲಿಲ್ಲ. ಈಗ ಪಕ್ಷದಲ್ಲಿ ತಾವಿಲ್ಲವಾದ್ದರಿಂದ ರೇವಣ್ಣ ಈ ನಿರ್ಧಾರ ಮಾಡಿರಬಹುದು ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
|