ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಗ್ಗಂಟಾದ ಪರ್ಯಾಯ ಪೀಠ ವಿವಾದ
ಪರ್ಯಾಯ ಪೀಠಾರೋಹಣ ಹಾಗೂ ಶ್ರೀಕೃಷ್ಣ ಪೂಜೆಯ ವಿವಾದ ಇದೀಗ ಕಗ್ಗಂಟಾಗಿದೆ. ಸಮಸ್ಯೆಯನ್ನು ಬಗೆಹರಿಸಲು ನಿನ್ನೆ ನಡೆದ ಎರಡು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಅಂತಿಮ ನಿರ್ಣಯದ ಜವಾಬ್ದಾರಿಯನ್ನು ಇದೀಗ ಪರ್ಯಾಯದಲ್ಲಿರುವ ಕೃಷ್ಣಾಪುರ ಮಠದ ಶ್ರೀಗಳಿಗೇ ಬಿಡಲಾಗಿದೆ. ಸಭೆಯ ನಂತರ ಮಾತನಾಡಿದ ಪುತ್ತಿಗೆಶ್ರೀಗಳು ಕೃಷ್ಣಾಪುರ ಶ್ರೀಗಳೊಂದಿಗೆ ಮಾತನಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉಡುಪಿ ಅಷ್ಠ ಮಠದ ಸಂಪ್ರದಾಯ ರೀತ್ಯ ಜನವರಿ 12ರಂದು ನೂತನ ಶ್ರೀಗಳು ಪರ್ಯಾಯ ಪೀಠಾರೋಹಣ ಮಾಡಬೇಕಾಗಿದೆ. ಸಾಗರೋಲ್ಲಂಘನದ ಹಿನ್ನೆಲೆಯಲ್ಲಿ ಕೃಷ್ಣ ಪೂಜೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪೇಜಾವರ ಶ್ರೀಗಳ ವಿರುದ್ದ ಬಹಿರಂಗವಾಗಿ ಧರ್ಮಸಮರ ಸಾರಿರುವ ಪುತ್ತಿಗೆ ಶ್ರೀಗಳು ನಿನ್ನೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದರು. ಇದರಿಂದಾಗಿ ಉಡುಪಿಯ ಬೀದಿ ಬೀದಿಯಲ್ಲಿ ದಿನವೀಡೀ ಕೃಷ್ಣಪೂಜೆಯ ವಿವಾದ ಪ್ರತಿಧ್ವನಿಸುತ್ತಿತ್ತು.

ಮೊದಲ ಸುತ್ತಿನ ಸಂಧಾನ ಸಭೆಯನ್ನು ಯಾವುದೇ ನಿರ್ಣಯಕ್ಕೆ ಬಾರದೆ ಮುಂದೂಡಲಾಗಿತ್ತು. ಮಧ್ಯರಾತ್ರಿಯ ವೇಳೆಗೆ ನಡೆದ ಸಂಧಾನ ಸಭೆಯ ಹೊತ್ತಿಗೆ ಪೇಜಾವರ ಶ್ರೀಗಳು ತಮ್ಮ ಬಿಗಿ ನಿಲುವನ್ನು ಸ್ವಲ್ಪ ಸಡಿಲಿಸಿದಂತೆ ಕಾಣುತಿತ್ತು. ಇದರಿಂದಾಗಿ ಮಧ್ಯರಾತ್ರಿಯ ಸಭೆಯಲ್ಲಿ ಒಮ್ಮತ ಮೂಡಬಹುದೆಂಬ ಆಶಾಭಾವನೆ ಇತ್ತು.

ಆದರೆ ಇತ್ತೀಚೆಗಿನ ವರದಿಗಳ ಪ್ರಕಾರ ವಿವಾದ ಇನ್ನೂ ಕಗ್ಗಂಟಾಗೇ ಉಳಿದಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಸಂಧಾನ ಸಭೆಯಲ್ಲಿ ಪುತ್ತಿಗೆ ಶ್ರೀಗಳ ಜೊತೆ ಅದಮಾರು, ಫಲಿಮಾರು, ಕೃಷ್ಣಾಪುರ, ಪೇಜಾವರ ಮಠಾಧೀಶರುಗಳು ಭಾಗವಹಿಸಿದ್ದರು ಎಂದು ಮಠದ ಮೂಲಗಳು ತಿಳಿಸಿವೆ.
ಮತ್ತಷ್ಟು
ರೇವಣ್ಣ ಸವಾಲಿಗೆ ಜಿ.ಟಿ. ದೇವೇಗೌಡ ಪ್ರತ್ಯುತ್ತರ
ವರ್ಷದ ವ್ಯಕ್ತಿ ಪ್ರಶಸ್ತಿ ಮಿಗಿಲು: ನಿಸಾರ್ ಅಹಮದ್
ಉಡುಪಿ ಪರ್ಯಾಯ: ಸಂಧಾನಕ್ಕೆ ಮೂಡದ ಒಮ್ಮತ
ನಾಲ್ವರಿಗೆ ನಾಡೋಜ ಪ್ರಶಸ್ತಿ ಪ್ರಕಟ
ರಾಜ್ಯಕ್ಕೆ ವಿದ್ಯುತ್ ಕಡಿತ-ಕೇಂದ್ರ ತಾರತಮ್ಯ
ರಾಮಸೇತು ವಿವಾದ ಹುಟ್ಟಿಹಾಕಿದ್ದು ಎನ್.ಡಿ.ಎ.