ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆಯಲ್ಲಿ ಕನ್ನಡ ಪರ ಅಭ್ಯರ್ಥಿಗೆ ಮತ
ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ನಾಡಿನ ಹಿತಕ್ಕಾಗಿ ಶ್ರಮಿಸುವ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡಬೇಕೆಂದು ರಾಷ್ಟ್ತ್ರಕವಿ ಜಿ.ಎಸ್. ಶಿವರುದ್ರಪ್ಪ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ಾ|ಪಿ.ಎಸ್. ಶಂಕರ್ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇಂದು ತನ್ನಿಂದ ತಾನೆ ಆಗಬೇಕಾದ ಕೆಲಸಗಳಿಗೆ ಹೋರಾಟ ಮಾಡುತ್ತಿರುವುದು ಕನ್ನಡಿಗರ ದುರ್ದೈವ. ತಮಿಳುನಾಡಿನಲ್ಲಿ ಭಾಷೆಗೆ ಸಂಬಂಧಿಸಿದ ಕೆಲಸಗಳು ಸುಲಲಿತವಾಗಿ ಆಗುತ್ತಿವೆ. ಆದರೆ ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸುವಲ್ಲಿ ರಾಜಕಾರಣಿಗಳು ವಿಫಲವಾಗಿದ್ದಾರೆ ಎಂದು ಹೇಳಿದರು.

ತಮಿಳಿನಷ್ಟೇ ಹಿರಿಮೆ, ಚರಿತ್ರೆಯುಳ್ಳ ಕನ್ನಡ ಭಾಷೆಗೂ ಆ ಭಾಷೆಯೊಂದಿಗೆಯೇ ಶಾಸ್ತ್ತ್ರಿಯ ಸ್ಥಾನಮಾನ ಸಿಗಬೇಕಾಗಿತ್ತು. ಆದರೆ ಕನ್ನಡ ಕೆಲಸಗಳಿಗಾಗಿ ಇಂದು ಕೂಡ ನಾವು ಹೋರಾಡುತ್ತಿರುವುದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು. ಹಿರಿಯ ಸಾಹಿತಿ ದೇಜಗೌ ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ ನೀಡುವ ಬಗ್ಗೆ ಮೈಸೂರಿನಲ್ಲಿ ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.

ಈ ಹಿಂದೆ ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ ನೀಡುವ ಬಗ್ಗೆ ಹಾಗೂ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಕುರಿತು ಸಲಹೆ ನೀಡಿರುವ ಮಹಿಷಿ ವರದಿ ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಿಸಲು ನಂಜುಂಡಪ್ಪ ವರದಿ ಜಾರಿಯ ವಿಷಯ ಇನ್ನೂ ತೂಗುಯ್ಯಾಲೆಯಲ್ಲಿದೆ. ಇದನ್ನು ನೋಡಿದರೆ ಮುಂದಿನ ಚುನಾವಣೆಗೆ ಕನ್ನಡಪರ ವಾತಾವರಣ ಉಂಟು ಮಾಡುವುದು ಅವಶ್ಯವಾಗಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ಬಿಜೆಪಿ ರೈತ ಸಮಾವೇಶಕ್ಕೆ ಭರದ ಸಿದ್ಧತೆ
ಕಗ್ಗಂಟಾದ ಪರ್ಯಾಯ ಪೀಠ ವಿವಾದ
ರೇವಣ್ಣ ಸವಾಲಿಗೆ ಜಿ.ಟಿ. ದೇವೇಗೌಡ ಪ್ರತ್ಯುತ್ತರ
ವರ್ಷದ ವ್ಯಕ್ತಿ ಪ್ರಶಸ್ತಿ ಮಿಗಿಲು: ನಿಸಾರ್ ಅಹಮದ್
ಉಡುಪಿ ಪರ್ಯಾಯ: ಸಂಧಾನಕ್ಕೆ ಮೂಡದ ಒಮ್ಮತ
ನಾಲ್ವರಿಗೆ ನಾಡೋಜ ಪ್ರಶಸ್ತಿ ಪ್ರಕಟ