ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಸೇರಲು ಸೋನಿಯಾ ಜತೆ ಚರ್ಚೆ: ಪ್ರಕಾಶ್
NEWS ROOM
ಜನತಾ ಪರಿವಾರದ ಹಿರಿಯ ಮುಖಂಡ ಎಂ.ಪಿ. ಪ್ರಕಾಶ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಅವರು ಬಿಜೆಪಿ ಸೇರುವ ಬಗ್ಗೆ ಇದ್ದ ಗುಮಾನಿಗೆ ಈಗ ತೆರೆ ಬಿದ್ದಂತಾಗಿದೆ.

ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಜನವರಿ 6 ಅಥವಾ 7 ರಂದು ಭೇಟಿ ಮಾಡಲಿರುವ ಪ್ರಕಾಶ್ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ. ಈ ಮೊದಲು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಆಸ್ಕರ್ ಕಾಂಗ್ರೆಸ್ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರು.

ಈ ಹಿಂದೆ ಪ್ರಕಾಶ್ ಬಿಜೆಪಿ ಸೇರುವ ಒಲವು ತೋರಿದ್ದರು. ಆದರೆ ಬಳ್ಳಾರಿ ಜಿಲ್ಲಾ ಬಿಜೆಪಿ ಮುಖಂಡರು ಇದಕ್ಕೆ ವಿರೋಧ ಪಡಿಸಿದ್ದರು. ಅಲ್ಲದೆ ಪ್ರಕಾಶ್ ಪುತ್ರ ಎಂ.ಪಿ.ರವಿ ಸೇರಿದಂತೆ ಅನೇಕ ಮುಖಂಡರಿಗೂ ಬಿಜೆಪಿ ಸೇರುವುದು ಸುತಾರಾಂ ಇಷ್ಟವಿರಲಿಲ್ಲ. ಕೊನೆಗೆ ಪ್ರಕಾಶ್ ಬಿಜೆಪಿ ಸೇರುವುದನ್ನು ಅರ್ಧದಲ್ಲಿಯೇ ಕೈಬಿಟ್ಟು ಈಗ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

ಅಲ್ಲದೆ ಪ್ರಕಾಶ್ ಜತೆಯಲ್ಲಿ ಗುರುತಿಸಿಕೊಂಡ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ದೊರಕುವುದು ಖಚಿತವಾದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ. ಸೋನಿಯಾ ಗಾಂಧಿಯವರ ಜೊತೆ ಮಾತುಕತೆ ಬಳಿಕ ಅಂತಿಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.
ಮತ್ತಷ್ಟು
ಚುನಾವಣೆಯಲ್ಲಿ ಕನ್ನಡ ಪರ ಅಭ್ಯರ್ಥಿಗೆ ಮತ
ಬಿಜೆಪಿ ರೈತ ಸಮಾವೇಶಕ್ಕೆ ಭರದ ಸಿದ್ಧತೆ
ಕಗ್ಗಂಟಾದ ಪರ್ಯಾಯ ಪೀಠ ವಿವಾದ
ರೇವಣ್ಣ ಸವಾಲಿಗೆ ಜಿ.ಟಿ. ದೇವೇಗೌಡ ಪ್ರತ್ಯುತ್ತರ
ವರ್ಷದ ವ್ಯಕ್ತಿ ಪ್ರಶಸ್ತಿ ಮಿಗಿಲು: ನಿಸಾರ್ ಅಹಮದ್
ಉಡುಪಿ ಪರ್ಯಾಯ: ಸಂಧಾನಕ್ಕೆ ಮೂಡದ ಒಮ್ಮತ