ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ಪಕ್ಷ ಕಟ್ಟುವುದಿಲ್ಲ: ಎಂ.ಪಿ. ಪ್ರಕಾಶ್
ಸಂಕ್ರಾಂತಿಯ ನಂತರ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ನಿರ್ಧರಿಸುವೆ ಎಂಬ ಮಾತನ್ನು ಪುನರುಚ್ಚರಿಸಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಜೆಡಿಎಸ್‌ನಲ್ಲಿ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತಾವು ಸೇರಲಿರುವ ಪಕ್ಷದ ತತ್ವ-ಸಿದ್ಧಾಂತಕ್ಕೆ ಅನುಗುಣವಾಗಿ ಕ್ರಿಯಾಶೀಲತೆ ರೂಪಿಸಿ ಸೇರುವುದಾಗಿಯೂ, ತಮ್ಮೊಂದಿಗೆ ಸುಮಾರು 18 ಶಾಸಕರೂ ಆ ಪಕ್ಷಕ್ಕೆ ಸೇರಲಿದ್ದಾರೆಂದೂ ತಿಳಿಸಿದರು.

ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದರ ಕುರಿತು ಜನಾರ್ದನ ರೆಡ್ಡಿಯವರು ವಿರೋಧ ವ್ಯಕ್ತಪಡಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್, ಯಾವುದಾದರೊಂದು ಹೊಸ ಪಕ್ಷ ಸೇರುವಾಗ ಈ ಬಗೆಯ ಅಸಮಾಧಾನ ಸಾಮಾನ್ಯ, ಇದು ತಪ್ಪೇನಲ್ಲ ಎಂದು ನುಡಿದರು.

ಎಸ್.ಬಂಗಾರಪ್ಪ, ವಿಜಯ ಸಂಕೇಶ್ವರ್ ಸೇರಿದಂತೆ ಅನೇಕರು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಲು ಮಾಡಿದ ಪ್ರಯತ್ನಗಳು ವಿಫಲರಾಗಿದ್ದಾರೆ. ಆದ್ದರಿಂದ ಹೊಸ ಪಕ್ಷ ಕಟ್ಟಿ ಮತದಾರರನ್ನು ಗೊಂದಲದಲ್ಲಿ ಸಿಲುಕಿಸುವ ಬದಲು ಇರುವ ಯಾವುದಾದರೊಂದು ಪಕ್ಷಕ್ಕೆ ಸೇರಿಕೊಳ್ಳುತ್ತೇನೆ ಎಂದು ಪ್ರಕಾಶ್ ತಿಳಿಸಿದರು.
ಮತ್ತಷ್ಟು
ಪಾಟೀಲ್ ಭೇಟಿ: ಚುನಾವಣೆ ಮುಂದೂಡುವ ಯತ್ನ?
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಖರ್ಗೆ: ಧರಂಸಿಂಗ್
ವಿಧಾನಪರಿಷತ್ ಅಧಿವೇಶನ ಕರೆಯುವಂತಿಲ್ಲ: ನಾಣಯ್ಯ
ಕಾಂಗ್ರೆಸ್ ಸೇರಲು ಸೋನಿಯಾ ಜತೆ ಚರ್ಚೆ: ಪ್ರಕಾಶ್
ಚುನಾವಣೆಯಲ್ಲಿ ಕನ್ನಡ ಪರ ಅಭ್ಯರ್ಥಿಗೆ ಮತ
ಬಿಜೆಪಿ ರೈತ ಸಮಾವೇಶಕ್ಕೆ ಭರದ ಸಿದ್ಧತೆ