ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆರಾಜುದ್ದೀನ್ ಪ್ರವಾಸಕ್ಕೆ ನಾಯಕರ ಬಲ ಇಲ್ಲ
ತೆರೆದ ಹೃದಯದ ಶಸ್ತ್ರಚಿಕಿತ್ಸೆಯಿಂದ ಕುಮಾರಸ್ವಾಮಿಯವರು ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ತಮ್ಮ ಜಿಲ್ಲಾ ಪ್ರವಾಸವನ್ನು ಆರಂಭಿಸಿದ್ದಾರೆ. ಇವರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರೂ ಸಹ ಇಲ್ಲ ಎಂಬುದು ಮತ್ತೊಂದು ವಿಶೇಷ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಿಂದ ಪಟೇಲ್ ತಮ್ಮ ಪ್ರವಾಸ ಆರಂಭಿಸಿದ್ದು, ಅವರೊಂದಿಗೆ ಪಕ್ಷದ ಎರಡನೇ ಸಾಲಿನ ಮುಖಂಡರಿದ್ದಾರೆ. ತಮ್ಮ ಜಿಲ್ಲಾ ಪ್ರವಾಸದ ಅವಧಿಯಲ್ಲಿ ಜಿಲ್ಲೆಯ ಪಕ್ಷದ ಪ್ರಮುಖ ಮುಖಂಡರನ್ನು ಭೇಟಿ ಮಾಡಿ, ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಪಟೇಲ್ ಗಮನ ನಿಡಲಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ವರಿಷ್ಠ ದೇವೇಗೌಡರು ಜನವರಿ 15ರ ನಂತರ ರಾಜ್ಯಾದ್ಯಂತ ತಮ್ಮ ಪ್ರವಾಸವನ್ನು ಆರಂಭಿಸಲಿದ್ದಾರೆ. ಇದರ ಜತೆಗೆ ಫೆಬ್ರವರಿ ಮೊದಲ ವಾರದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರವಾಸ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೆರಾಜುದ್ದೀನ್ ಅವರ ಪ್ರವಾಸ ಸೂಕ್ತ ವೇದಿಕೆ ನಿರ್ಮಿಸಲಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಹೊಸ ಪಕ್ಷ ಕಟ್ಟುವುದಿಲ್ಲ: ಎಂ.ಪಿ. ಪ್ರಕಾಶ್
ಪಾಟೀಲ್ ಭೇಟಿ: ಚುನಾವಣೆ ಮುಂದೂಡುವ ಯತ್ನ?
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಖರ್ಗೆ: ಧರಂಸಿಂಗ್
ವಿಧಾನಪರಿಷತ್ ಅಧಿವೇಶನ ಕರೆಯುವಂತಿಲ್ಲ: ನಾಣಯ್ಯ
ಕಾಂಗ್ರೆಸ್ ಸೇರಲು ಸೋನಿಯಾ ಜತೆ ಚರ್ಚೆ: ಪ್ರಕಾಶ್
ಚುನಾವಣೆಯಲ್ಲಿ ಕನ್ನಡ ಪರ ಅಭ್ಯರ್ಥಿಗೆ ಮತ