ಬೇರೆಯವರಲ್ಲಿರುವ ಲೋಪದೋಷಗಳನ್ನು ನುಂಗಿಕೊಂಡು ಒಳ್ಳೆಯ ತನವನ್ನಷ್ಟೇ ಎತ್ತಿ ತೋರಿಸಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸೋಮಕ್ಷತ್ರಿಯ ವೈಷ್ಣವ ಸಮಾಜ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದ ಅವರು ಶ್ರೀಕೃಷ್ಣನ ವಂಶಸ್ಥ ಸಮಾಜವಾಗಿರುವ ಸೋಮಕ್ಷತ್ರಿಯ ಸಮಾಜದ ಬೆಂಬಲದೊಂದಿಗೆ ತಾವು ಶ್ರೀಕೃಷ್ಣನ ಪೂಜೆಗೆ ಮುಂದಾಗುತ್ತಿರುವುದು ಸಂತಸದ ವಿಷಯ ಎಂದು ನುಡಿದರು.
ತಲೆಯ ಮೇಲೆ ಚಂದ್ರನನ್ನು ಅಲಂಕರಿಸಿಕೊಂಡಿರುವ ಶಿವನು ಗಂಟಲಿನಲ್ಲಿ ವಿಷವನ್ನು ನುಂಗಿಕೊಂಡಿದ್ದಾನೆ. ಒಳ್ಳೆಯದನ್ನು ತಲೆಯ ಮೇಲಿಟ್ಟುಕೊಂಡು ದೋಷಗಳನ್ನು ನುಂಗಿಕೊಳ್ಳಬೇಕು ಎಂಬುದು ಇದರ ಸಂಕೇತ ಎಂದು ಶ್ರೀಗಳು ತಿಳಿಸಿದರು.
ಹೊಟೇಲ್ ಉದ್ಯಮ ಹಾಗೂ ಸಮಾಜ ಸೇವೆಗಾಗಿ ಹಳ್ಳಿಮನೆ ಹೊಟೇಲ್ನ ಮಾಲೀಕರಾದ ಎನ್.ಸಂಜೀವರಾವ್, ಸಮಾಜ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸೋಮಕ್ಷತ್ರಿಯ ಸಮಾಜದ ಅಧ್ಯಕ್ಷ ಕೆ.ಗೋಪಲ್, ಕೈಗಾರಿಕೋದ್ಯಮಿ ವಿಜಯ್ಕುಮಾರ್ ಹಾಗೂ ಯಕ್ಷಗಾನ ಕ್ಷೇತ್ರದ ಬ್ರಹ್ಮಾವರದ ಬಿರ್ತಿ ಬಾಲಕೃಷ್ಣರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
|