ಕಾಂಗ್ರೆಸ್ ಪಕ್ಷದಲ್ಲಿ ಆರಾಮವಾಗಿದ್ದೀನಿ. ಯಾವ ತಲೆ ಬೀಸೀನೂ ಇಲ್ಲ. ಹೈಕಮಾಂಡ್ ಯಾವ ಸ್ಥಾನ ಕೊಡುತ್ತೋ ಅದಕ್ಕೆ ಬದ್ದವಾಗಿದ್ದೀನಿ. ನೋ ಪ್ರಾಬ್ಲಂ. ಸಾಮಾನ್ಯವಾಗಿ ಪಕ್ಷಾಂತರ ಮಾಡಿ ಬಂದವರಿಗೆ ಕಾಂಗ್ರೆಸ್‌ನಲ್ಲಿ ಮಣೆ ಹಾಕೋಲ್ಲ ಅನ್ನೋ ಮಾತಿದೆ ನಿಜವಾ? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಉತ್ತರವಿದು. ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯಲ್ಲಿ ಅವರು ಜನಾಂದೋಲನ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
ಭಾಷಣದುದ್ದಕ್ಕೂ ಬಿಜೆಪಿಯ ಅಧಿಕಾರ ದಾಹವನ್ನು, ಜೆಡಿ(ಎಸ್)ನ ಕುಟುಂಬ ರಾಜಕೀಯವನ್ನು ಲೇವಡಿ ಮಾಡಿದ ಸಿದ್ಧರಾಮಯ್ಯ, ಬಿಜೆಪಿ, ಜೆಡಿ(ಎಸ್) ಪಕ್ಷಗಳು ಒಡೆದ ಮನೆಯಿದ್ದಂತೆ. ಆದರೆ ಕಾಂಗ್ರೆಸ್ ಒಂದು ಸುಭದ್ರ ಕೋಟೆಯಿದ್ದಂತೆ.
ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅಷ್ಟೇ. ಹೈಕಮಾಂಡ್ ನನಗೆ ಈಗ ಭಾಷಣ ಮಾಡಲು ಹೇಳಿದೆ. ಮಾಡ್ತಾ ಇದ್ದೀನಿ. ನಿಮ್ಮೊಂದಿಗೆ ಬೆರೀತಾ ಇದ್ದೀನಿ. ಸಧ್ಯಕ್ಕೆ ಪಕ್ಷದಲ್ಲಿ ನನಗೆ ಸಿಕ್ಕ ಸ್ಥಾನ ಇದೇ. ಅಷ್ಟಕ್ಕೇ ತೃಪ್ತಿ ಇದೆ ಎಂದರು. ಇನ್ನು ತಮ್ಮ ಹಾಗೂ ಮಹದೇವು ನಡುವಿನ ಪ್ರಕರಣ ಕೇವಲ ಮಾಧ್ಯಮದವರ ಊಹಾಪೋಹ. ಮಹದೇವು ಅವರು ಹೈಕಮಾಂಡ್‌ಗೆ ಸಲ್ಲಿಸಿರುವ ಸಿಡಿಯಲ್ಲಿ ಯಾವುದೇ ಹುರುಳಿಲ್ಲ ಎಂದರು.
|