ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಲ್ಲದ ಪ್ರತಿಭಟನೆ : 60 ಮಂದಿ ಬಂಧನ
ಸಂಗೂರು ಸಕ್ಕರೆ ಕಾರ್ಖಾನೆ ಮುಚ್ಚಿರುವುದನ್ನು ಪ್ರತಿಭಟಿಸಿ ನಡೆಯುತ್ತಿರುವ ಕಾರ್ಮಿಕರ ಚಳುವಳಿ ತಾರಕಕ್ಕೇರಿದೆ. ವಿದ್ಯಾರ್ಥಿ ಸಮುದಾಯ ಬೆಂಬಲ ಘೋಷಿಸಿದ್ದು ಇಂದಿನ ಸಭೆಯಲ್ಲಿ ತಾನೂ ಕೈಜೋಡಿಸುವುದಾಗಿ ಹೇಳಿರುವುದು ಪ್ರತಿಭಟನೆಯ ಕಾವನ್ನು ಏರಿಸಿದೆ. ಪ್ರತಿಭಟನೆಯ ಬಿಸಿ ಈಗಾಗಲೇ 50 ದಿನಗಳನ್ನು ಮುಟ್ಟಿದೆ.

ಬಡವರ ರೈತರ ಬದುಕು ಹುಳುಕಾಗಿದೆ. ಸಿಹಿಯಾಗಬೇಕಿದ್ದ ಸಕ್ಕರೆ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಕಹಿಯಾಗಿದೆ ಎಂದು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಚಲನಚಿತ್ರ ನಟ ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ. ಪ್ರತಿಭಟನೆ ತೀವ್ರವಾಗುತ್ತಿರುವುದನ್ನು ಮನಗಂಡ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಚಿತ್ರನಟ ಅಶೋಕ್, ಕಾರ್ಮಿಕ ನಾಯಕ ಎಂ. ಗೋಪಾಲ್ ಸೇರಿದಂತೆ 60 ಮಂದಿಯನ್ನು ಬಂಧಿಸಿದ್ದಾರೆ.

ಈ ನಡುವೆ ಪೊಲೀಸರ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಹಾವೇರಿ ಉತ್ಸವದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಈ ನಿಲುವು ಸ್ಪಷ್ಟವಾಗಿದೆ. ಅಲ್ಲಿ ರೈತರು ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿರುವಾಗ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ ಹಾವೇರಿ ಉತ್ಸವ ಬೇಕೆ? ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಪ್ರತಿನಿಧಿಗಳು ಹಾವೇರಿ ಉತ್ಸವ ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಮತ್ತಷ್ಟು
ಕಾಂಗ್ರೆಸ್‌ನಲ್ಲಿ ಆರಾಮ, ನೋ ಪ್ರಾಬ್ಲಂ: ಸಿದ್ದು
ಒಳ್ಳೆಯತನವನ್ನು ಮಾತ್ರ ಎತ್ತಿತೋರಿಸಿ: ಪುತ್ತಿಗೆ ಶ್ರೀ
ಸುಗುಣೇಂದ್ರರ ಆರೋಪ ಸುಳ್ಳು: ಪೇಜಾವರ ಶ್ರೀ
ಸಂಪೂರ್ಣ ಮಾಧ್ಯಮ ಗ್ರಾಮಗಳಾಗಿ ಪರಿವರ್ತನೆ
ಮೆರಾಜುದ್ದೀನ್ ಪ್ರವಾಸಕ್ಕೆ ನಾಯಕರ ಬಲ ಇಲ್ಲ
ಹೊಸ ಪಕ್ಷ ಕಟ್ಟುವುದಿಲ್ಲ: ಎಂ.ಪಿ. ಪ್ರಕಾಶ್