ಹಗರಣ, ಪ್ರತಿಭಟನೆಗಳ ಸರಮಾಲೆಯಿಂದಾಗಿ ಮೈಸೂರಿನ ಮಾನಸಗಂಗೋತ್ರಿ ಇಂದು ಮಲಿನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಪಾವಿತ್ರ್ಯ ಹೊಂದಿ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿದ್ದ ಮೈಸೂರು ವಿವಿ ಇಂದು ಬೀದಿಗೆ ಬಿದ್ದಿದೆ. ಜಾತಿ, ವಿಜಾತಿಗಳ ಕಲಹದ ಗೂಡಾಗಿರುವ ಮೈಸೂರು ವಿವಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಅವ್ಯವಹಾರದ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡಿರುವ ಜಿ. ಶಶಿಧರ ಪ್ರಸಾದ್‌ರವರಿಗೆ ರಾಜಕೀಯ ನಾಯಕರ ಬೆಂಬಲವಿದೆ. ಅವರ ಕಾಲಾವಧಿಯಲ್ಲಿ ಜರುಗಿದ ಅವ್ಯವಹಾರಗಳನ್ನು ಮುಚ್ಚಿಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬುಧವಾರ ಮಾನಸಗಂಗೋತ್ರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರಕರಣವನ್ನು ಸಿ.ಓ.ಡಿ. ತನಿಖೆಗೆ ಒಳಪಡಿಸುವುದೇ ಸೂಕ್ತ ಎಂದು ಪಂಡಿತಾರಾಧ್ಯ ಹೇಳಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಂಡಿತಾರಾಧ್ಯ ಮೈಸೂರು ವಿವಿಯ ಮುಂದಿನ ಉಪಕುಲಪತಿಯಾಗಿ ರಂಗಪ್ಪನವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದರು. ರಂಗಪ್ಪನವರ ನೇತೃತ್ವವನ್ನು ವಿರೋಧಿಸುವುದರ ಹಿಂದೆ ಜಾತಿಯ ಸಂಚು ಅಡಗಿದೆ. ಇದು ಮುಂದೆ ಜಾತಿ ಸಮರಕ್ಕೂ ಕಾರಣವಾಗಲಿದೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
|