ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುವರಂಗ ನಿರ್ದೇಶಕರಿಂದ ನಾಟಕೋತ್ಸವ
ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕನ್ನಡ ಸಂಸ್ಕ್ಕತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಜನವರಿ 6ರಿಂದ ಯುವರಂಗ ನಿರ್ದೇಶಕರ ನಾಟಕೋತ್ಸವವನ್ನು ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ನಾಟಕೋತ್ಸವದಲ್ಲಿ ನಾಟಕ ಪ್ರದರ್ಶನ, ತಂಡದ ನಿರ್ದೇಶಕರು ಹಾಗೂ ಕಲಾವಿದರೊಂದಿಗೆ ಸಂವಾದ, ನಾಟಕ ಕೃತಿಗಳ ಬಿಡುಗಡೆ, ಛಾಯಚಿತ್ರಗಳ ಪ್ರದರ್ಶನ ಹಾಗೂ ರಂಗಗೀತೆಗಳ ಧ್ವನಿಸುರುಳಿ ಪ್ರದರ್ಶನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಕಾರ್ಯದರ್ಶಿ ಜಿ.ಎಂ. ವಿಠಲಮೂರ್ತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣನವರು, ನಾಟಕೋತ್ಸವದ ಬಗ್ಗೆ ಮಾಹಿತಿ ನೀಡಿದರು.

ನಾಟಕೋತ್ಸವನ್ನು ಶಾಸಕ, ನಾಟಕಕಾರರಾದ ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ. ರಂಗ ನಿರ್ದೇಶಕಿ ಬಿ.ಜಯಶ್ರೀ, ಕನ್ನಡ ಮತ್ತು ಸಂಸ್ಕ್ಕತಿ ನಿರ್ದೇಶನಾಲಯದ ನಿರ್ದೇಶಕ ಮನು ಬಳಿಗಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನಾಟಕೋತ್ಸವವು ಜನವರಿ 6ರಿಂದ 15ರವರೆಗೆ ನಡೆಯಲಿದ್ದು, ಡಾ. ಶ್ರೀಪಾದ್ ಭಟ್ ಅವರ ಉಷಾಹರಣ, ಡಾ.ಕೆ. ರಾಮಕೃಷ್ಣಯ್ಯ ಅವರ ದಾರಾಶಿಕೊ, ಸಾಸಿವೆಹಳ್ಳಿ ಸತೀಶ್ರ ಬಳಾರೆ ವಿಚಿತ್ರಂ, ಮಂಜುನಾಥ್ ಎಲ್. ಬಡಿಗೇರ ಅವರ ಪರಿತ್ಯಕ್ತ ಸೇರಿದಂತೆ ಹಲವು ನಾಟಕಗಳು ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಪತ್ರಿಕಾಗೋಷ್ಠಿಯಲ್ಲಿ ನಾಟಕ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಉಪಸ್ಥಿತರಿದ್ದರು.
ಮತ್ತಷ್ಟು
ರೈತರ ಸಮಸ್ಯೆಗಳಿಗೆ ಹೆಚ್ಚಿನ ಗಮನ
ಕೇಂದ್ರದಲ್ಲೂ ಮಧ್ಯಂತರ ಚುನಾವಣೆ ಸಾಧ್ಯತೆ
ರಾಜ್ಯಪಾಲರ ಜತೆ ಶಿವರಾಜ್ ಪಾಟೀಲ್ ಚರ್ಚೆ
ನಿಧಾನಗತಿಯ ಪಟ್ಟಿ ಪರಿಷ್ಕರಣೆಗೆ ಅಸಮಾಧಾನ
ಮಲಿನಗೊಂಡ ಮಾನಸ ಗಂಗೋತ್ರಿ
ಸಿಎಂ ಅಭ್ಯರ್ಥಿ: ಚುನಾವಣೆಗೆ ಮುನ್ನ ಘೋಷಣೆ