ಬಿಜೆಪಿಯ ಜನಜಾಗೃತಿ ಯಾತ್ರೆ ಇಂದು ಹುಬ್ಬಳ್ಳಿ ಮತ್ತು ನರಗುಂದದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಜನಜಾಗೃತಿ ಸಮಾವೇಶದಲ್ಲಿ ಖ್ಯಾತ ವಾಣಿಜ್ಯೋದ್ಯಮಿ ಹಾಗೂ ಮಾಜಿ ಸಂಸದ ವಿಜಯ ಸಂಕೇಶ್ವರ್ ಮತ್ತು ಖಾನಾಪುರದ ಜಯಂತ್ ಕಿಣೇಕರ್ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ವಿಜಯ್ ಸಂಕೇಶ್ವರರವರ ಬಿಜೆಪಿ ಸೇರ್ಪಡೆ ಬಗೆಗಿನ ಎಲ್ಲಾ ಊಹಾಪೋಹಗಳಿಗೆ ಮಂಗಳ ಹಾಡಿದಂತಾಗಿದೆ.
ಸಂಕೇಶ್ವರ ಒಬ್ಬ ಖ್ಯಾತ ಕೈಗಾರಿಕೋದ್ಯಮಿಯಷ್ಟೇ ಅಲ್ಲ, ರಾಜ್ಯ ಕಂಡ ಉತ್ತಮ ಸಂಸದೀಯ ಪಟು. ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಮತ್ತೆ ಮರಳುತ್ತಿರುವ ಸಂಕೇಶ್ವರ ಅವರನ್ನು ಸ್ವಾಗತಿಸುತ್ತೇನೆ. ಇದರಿಂದಾಗಿ ಬಿಜೆಪಿಗೆ ಉತ್ತರ ಕರ್ನಾಟಕದಲ್ಲಿ ಮತ್ತಷ್ಟು ಬೆಂಬಲ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.
|