ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನ ಮಾಲತಿ ರಾವ್‌ಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ
2007ನೇ ಸಾಲಿನ ಕೇಂದ್ರೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಬೆಂಗಳೂರು ಮೂಲದ ಇಂಗ್ಲೀಷ್ ಲೇಖಕಿ ಮಾಲತಿರಾವ್ ಅವರ ಕಾದಂಬರಿ "ಡಿಸ್ಆರ್ಡರ್ಲಿ ವುಮೆನ್'ಗೆ ಈ ಬಾರಿ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಯನ್ನು ಫೆಬ್ರವರಿ 20ರಂದು ಪ್ರದಾನ ಮಾಡಲಾಗುತ್ತದೆ ಎಂದು ಸಾಹಿತ್ಯ ಅಕಾಡೆಮಿಯ ಮೂಲಗಳು ತಿಳಿಸಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಲತಿರಾವ್, ಪ್ರಶಸ್ತಿಯಿಂದಾಗಿ ಜವಾಬ್ದಾರಿ ಹೆಚ್ಚಿದೆ. ಮತ್ತಷ್ಟು ಬರೆಯಲು ಪ್ರೇರೇಪಿಸಿದೆ. ಇದೊಂದು ಅಭೂತಪೂರ್ವ ಅನುಭವ. ನಾನು ಬರೆದ ಪುಸ್ತಕವನ್ನು ಮತ್ಯಾರೋ ಗುರುತಿಸಿ ಗೌರವಿಸುತ್ತಿದ್ದಾರೆ ಎನ್ನುವುದಕ್ಕಿಂತ ಮತ್ತೇನು ಬೇಕು? ಎಂದ ಅವರು, ಈ ಪ್ರಶಸ್ತಿಯಿಂದ ಯಾರಾದರೂ ಪ್ರಕಾಶಕರ ಕಣ್ಣಿಗೆ ನನ್ನ ಹಸ್ತಪ್ರತಿ ಬಿದ್ದೀತೆಂಬುದು ನನ್ನ ಭಾವನೆ ಎಂದು ಹೇಳುವುದನ್ನು ಮರೆಯಲಿಲ್ಲ.

ತಮ್ಮ "ಅವಾರ್ಡ್ಲಿ ವಿನ್ನರ್" ಕಾದಂಬರಿಯ ಬಗ್ಗೆ ಮಾತನಾಡುತ್ತ ಅವರು, ಎಳೆಯ ವಯಸ್ಸಿನಲ್ಲೇ ಮದುವೆಯಾಗುವ ಹುಡುಗಿಯೊಬ್ಬಳು ಬೆಳೆದು ದೊಡ್ಡವಳಾಗಿ ದುಡಿಯುವ ಮಹಿಳೆಯಾಗುವ ಸಮಗ್ರ ಚಿತ್ರಣ ಇದರಲ್ಲಿದೆ. ಸಂಬಂಧಗಳೇ ತಿಳಿಯದ ವಯಸ್ಸಿನಲ್ಲಿ ಸಮಾಜದ ಕಟ್ಟಳೆಗಳೊಂದಿಗೆ ಹೋರಾಡುವ ಮಿಡಿತಗಳನ್ನಾಧರಿಸಿದೆ. ನಮ್ಮ ಸಮಾಜದಲ್ಲಿನ ಲಿಂಗಭೇದ ಮತ್ತು ಮಹಿಳೆಯ ಸ್ಥಾನಮಾನ ಕುರಿತಾಗಿ ಚಿಂತನೆ ನಡೆಸುವ ಪ್ರಯತ್ನ ಇಲ್ಲಿದೆ ಎಂದರು.

ಬೇರೆಲ್ಲಾ ವಿಭಾಗದ ಅಕಾಡೆಮಿ ಪ್ರಶಸ್ತಿಗಳು ಹೋದ ವಾರದಲ್ಲೇ ಪ್ರಕಟವಾಗಿತ್ತು. ಆದರೆ ಇಂಗ್ಲೀಷ್ ವಿಭಾಗಕ್ಕೆ ಸಲ್ಲುವ ಪ್ರಶಸ್ತಿಯನ್ನು ಈ ಬಾರಿ ತಡವಾಗಿ ಪ್ರಕಟಿಸಲಾಗಿದೆ. ಪುಸ್ತಕದ ಆಯ್ಕೆ ವಿಚಾರದಲ್ಲಿ ಗೊಂದಲ ಇತ್ತೆಂಬ ಮಾಧ್ಯಮದ ವರದಿಗಳನ್ನು ನಾನು ಒಪ್ಪುವುದಿಲ್ಲ. ನನ್ನ ಅನಿಸಿಕೆಯಲ್ಲಿ ಅಕಾಡೆಮಿಗೆ ನನ್ನ ಹೊಸ ವಿಳಾಸ ಗೊತ್ತಿಲ್ಲದಿದ್ದರಿಂದ ಪ್ರಕಟಿಸುವುದು ತಡವಾಗಿದೆ ಅಷ್ಟೇ ಎಂದು ಅವರು ಹೇಳಿದರು.
ಮತ್ತಷ್ಟು
ಸಂಕೇಶ್ವರ, ಕಿಣೇಕರ್ ಬಿಜೆಪಿಗೆ ಸೇರ್ಪಡೆ
ಕಸಾಪ ಅಧ್ಯಕ್ಷ ಚುನಾವಣೆಗೆ ಸಿದ್ಧತೆ
ಸ್ಥಾನ ಬಿಟ್ಟು ಕೊಡದ ಎಚ್.ಕೆ.ಪಾಟೀಲ್
ಯುವರಂಗ ನಿರ್ದೇಶಕರಿಂದ ನಾಟಕೋತ್ಸವ
ರೈತರ ಸಮಸ್ಯೆಗಳಿಗೆ ಹೆಚ್ಚಿನ ಗಮನ
ಕೇಂದ್ರದಲ್ಲೂ ಮಧ್ಯಂತರ ಚುನಾವಣೆ ಸಾಧ್ಯತೆ