ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಧಾನಸಭಾ ಚುನಾವಣೆಯ ಬಳಿಕ ಪಾಲಿಕೆ ಚುನಾವಣೆ
ವಾರ್ಡ್‌ಗಳ ವಿಂಗಡಣಾ ಕಾರ್ಯ ವಿಳಂಬವಾಗುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯು ಇನ್ನು ಆರು ತಿಂಗಳು ತಡವಾಗುವ ಸಾಧ್ಯತೆಗಳಿವೆ.

ನಗರ ಪಾಲಿಕೆಯ ಅವಧಿ ಈಗಾಗಲೇ ಪೂರ್ಣಗೊಂಡಿದ್ದು, ಬೃಹತ್ ಬೆಂಗಳೂರು ರಚನೆಯಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ವಾರ್ಡ್‌ಗಳ ವಿಂಗಡಣಾ ಕಾರ್ಯ ಇನ್ನೂ ಪ್ರಗತಿಯಲ್ಲಿರುವುದರಿಂದ ವಿಧಾನಸಭಾ ಚುನಾವಣೆಯ ನಂತರ ಪಾಲಿಕೆ ಚುನಾವಣೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಾರ್ಡ್ ವಿಂಗಡಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಂದ ವಿವರಣೆಯನ್ನು ಕೇಳಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಕಳುಹಿಸಿದ್ದರು. ಆದರೆ ಈಗ ಮತ್ತೆ ಹೊಸ ಪ್ರಸ್ತಾವದ ಬಗ್ಗೆ ಮಾಹಿತಿ ನೀಡಬೇಕಾಗಿದೆ.

ವಾರ್ಡ್‌ಗಳ ಪುನರ್ ವಿಂಗಡಣೆಯ ನಂತರ ವಾರ್ಡ್‌ಗಳ ಮೀಸಲಾತಿ ನಿಗದಿ ಕಾರ್ಯ ಹೀಗೆ ಹತ್ತು ಹಲವು ಸಿದ್ದತೆಗಳು ನಡೆಯಬೇಕಾಗಿರುವುದರಿಂದ ಚುನಾವಣೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಷರೀಫ್ ವಿಧಾನಸಭೆಗೆ ಸ್ಪರ್ಧಿಸುವ ಚಿಂತನೆ
ಕ್ಷೇತ್ರ ಪುನರ್ ವಿಂಗಡಣೆ ಅನ್ವಯ ಚುನಾವಣೆ : ಖರ್ಗೆ
ರೈತ ಸಂಘ ಕರೆದಿದ್ದ ಮಂಡ್ಯ ಬಂದ್ ಯಶಸ್ವಿ
ರಾಜ್ಯಾದ್ಯಂತ ಜೆಡಿಎಸ್ ಚುನಾವಣಾ ಪ್ರವಾಸ
ಕುಮಾರಸ್ವಾಮಿ ವಿರುದ್ಧ ವಿಚಾರಣೆಗೆ ಆದೇಶ
ರೈತರ ಆತ್ಮಹತ್ಯೆಗೆ ಸರ್ಕಾರವೇ ಹೊಣೆ: ಸಿಂಗ್