ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದ ಪುನರ್ವಿಂಗಡಿತ ಕ್ಷೇತ್ರದಲ್ಲೂ ಚುನಾವಣೆ
ಕರ್ನಾಟಕದಲ್ಲಿ ಪುನರ್ವಿಂಗಡಿತ ಕ್ಷೇತ್ರಗಳಲ್ಲೂ ಚುನಾವಣೆ ನಡೆಯುವ ನಿರೀಕ್ಷೆ ಇದ್ದು, ಈ ಮೂಲಕ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಚುನಾವಣೆ ಎದುರಿಸುವ ಮೊದಲ ರಾಜ್ಯ ಎಂಬ ಹೆಸರಿಗೆ ಪಾತ್ರವಾಗಲಿದೆ.

ಸಂಪುಟ ಸಮಿತಿಗೆ ಗುರುವಾರ ರಾತ್ರಿ ಸಲ್ಲಿಸಲಾಗಿದ್ದ ಪುನರ್ವಿಂಗಡಣಾ ಆಯೋಗದ ವರದಿಯ ಅನುಸಾರವೇ ಚುನಾವಣೆ ನಡೆಯಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಿರಿಯ ಸಚಿವರೊಬ್ಬರು, ಕರ್ನಾಟಕ ಚುನಾವಣೆಗೂ ಮೊದಲೇ ಪುನರ್ವಿಂಗಡಣೆ ಕಾರ್ಯ ಮುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ಆಡಳಿತದಡಿ ಇರುವ ಕರ್ನಾಟಕದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ಶೇ.23ರಷ್ಟು ದಲಿತರು ಇರುವುದರಿಂದ ಮರುವಿಂಗಡಣೆಯಾದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ನಿರೀಕ್ಷೆಯನ್ನು ಪಕ್ಷಗಳು ವ್ಯಕ್ತಪಡಿಸಿವೆಯಾದರೂ, ಕೆಲವರ ಪ್ರಕಾರ, ಸಮಯ ಕಡಿಮೆ ಇರುವುದರಿಂದ ಪುನರ್ವಿಂಗಡಿತ ಕ್ಷೇತ್ರದಲ್ಲಿ ಚುನಾವಣೆ ತ್ರಾಸದಾಯಕವಾಗಲಿದೆ.
ಮತ್ತಷ್ಟು
ಎಸ್.ಎಂ.ಕೃಷ್ಣ: ರಾಜಭವನ ಬೋರ್, ರಾಜ್ಯಕ್ಕೆ ಬರುವೆ
ವಿಧಾನಸಭಾ ಚುನಾವಣೆಯ ಬಳಿಕ ಪಾಲಿಕೆ ಚುನಾವಣೆ
ಷರೀಫ್ ವಿಧಾನಸಭೆಗೆ ಸ್ಪರ್ಧಿಸುವ ಚಿಂತನೆ
ಕ್ಷೇತ್ರ ಪುನರ್ ವಿಂಗಡಣೆ ಅನ್ವಯ ಚುನಾವಣೆ : ಖರ್ಗೆ
ರೈತ ಸಂಘ ಕರೆದಿದ್ದ ಮಂಡ್ಯ ಬಂದ್ ಯಶಸ್ವಿ
ರಾಜ್ಯಾದ್ಯಂತ ಜೆಡಿಎಸ್ ಚುನಾವಣಾ ಪ್ರವಾಸ