ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿಐಸಿಐ ಬ್ಯಾಂಕ್: ಕೆಟ್ಟಮೇಲೆ ಬುದ್ದಿ ಬಂತು
ಚಾಮರಾಜನಗರ: ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕೊನೆಗೂ ಐಸಿಐಸಿಐ ಬ್ಯಾಂಕ್ ಸಿದ್ದರಾಜು ಕುಟುಂಬದ ನೆರವಿಗೆ ಮುಂದಾಗಿದೆ. ಸಾಲದ ಬಾಧೆ ತಾಳಲಾರದೆ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡಿದ್ದು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದಿದ್ದು ಚರ್ಚೆಗೆ ಕಾರಣವಾಗಿತ್ತು.

ರೈತ ಸಿದ್ದರಾಜು ಈಗಿಲ್ಲವಾದರೂ ಅವನ ಕುಟುಂಬ ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಿದ್ದರಾಜು ಮಾಡಿ ಬಿಟ್ಟು ಹೋದ ಸಾಲದಿಂದ ಕಂಗಾಲಾಗಿದ್ದ ಕುಟುಂಬಕ್ಕೆ ಐಸಿಐಸಿಐ ಕೊನೆಗೂ ನೆರವಿನ ಹಸ್ತ ಚಾಚಿದೆ. ಬ್ಯಾಂಕಿನ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಸಿದ್ದರಾಜು ಮಾಡಿದ ಎಲ್ಲಾ ಸಾಲವನ್ನು ಮನ್ನಾ ಮಾಡಲಾಗಿದೆ, ಬ್ಯಾಂಕಿನ ವತಿಯಿಂದ ಕೊಂಡ ಟ್ರ್ಯಾಕ್ಟರ್ ಅನ್ನು ಅವನ ಸಂಸಾರಕ್ಕೇ ಉಚಿತವಾಗಿ ಕೊಡಲಾಗಿದೆ ಎಂದು ತಿಳಿಸಿದೆ.

ಸ್ಥಳೀಯ ಶಾಸಕ ಹಾಗೂ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್‌ರವರು ಸಿದ್ದರಾಜು ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರ ರೂಪವಾಗಿ ಒಂದು ಲಕ್ಷ ರೂಪಾಯಿಯನ್ನು ಕೊಟ್ಟಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ಸಿದ್ದರಾಜುವಿನ ಆತ್ಮಹತ್ಯೆಯ ನಂತರ ಅವನ ಸಂಸಾರ ಬೀದಿಗೆ ಬಿದ್ದಿತ್ತು. ದಿಕ್ಕು ಕಾಣದೆ ಪರಿತಪಿಸುತಿತ್ತು. ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಬ್ಯಾಂಕಿನ ಅಧಿಕಾರಿಗಳು ಕೊನೆಗೂ ಎಚ್ಚೆತ್ತರು. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಸಾಲ ಮನ್ನಾ ಮಾಡಿ ಋುಣ ತೀರಿಸಿದ ಸಂತೃಪ್ತಿಯ ನಗೆ ಚೆಲ್ಲಿದ್ದಾರೆ.
ಮತ್ತಷ್ಟು
ಜೆಪಿಯಲ್ಲಿ ಸ್ಫೋಟಿಸಿರುವ ಆಂತರಿಕ ಭಿನ್ನಮತ
ರಾಜ್ಯದ ಪುನರ್ವಿಂಗಡಿತ ಕ್ಷೇತ್ರದಲ್ಲೂ ಚುನಾವಣೆ
ಎಸ್.ಎಂ.ಕೃಷ್ಣ: ರಾಜಭವನ ಬೋರ್, ರಾಜ್ಯಕ್ಕೆ ಬರುವೆ
ವಿಧಾನಸಭಾ ಚುನಾವಣೆಯ ಬಳಿಕ ಪಾಲಿಕೆ ಚುನಾವಣೆ
ಷರೀಫ್ ವಿಧಾನಸಭೆಗೆ ಸ್ಪರ್ಧಿಸುವ ಚಿಂತನೆ
ಕ್ಷೇತ್ರ ಪುನರ್ ವಿಂಗಡಣೆ ಅನ್ವಯ ಚುನಾವಣೆ : ಖರ್ಗೆ