ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋರ್ಟ್ ಮೆಟ್ಟಿಲೇರಿದ ಪರ್ಯಾಯ ವಿವಾದ
ಪರ್ಯಾಯ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗ ಈ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದೆ. ವಿದೇಶಿ ಪ್ರವಾಸ ಮಾಡಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರು ಶ್ರೀಕೃಷ್ಣ ಪೂಜೆಗೆ ಅರ್ಹರಲ್ಲ. ಇದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಇಬ್ಬರೂ ಪ್ರತ್ಯೇಕವಾಗಿ ದಾವೆ ಹೂಡಿದ್ದಾರೆ.

ಪುತ್ತಿಗೆ ಶ್ರೀಗಳಿಗೆ ಶ್ರೀಕೃಷ್ಣನ ಪೂಜೆಗೆ ಅವಕಾಶ ನೀಡಬಾರದೆಂದು ನ್ಯಾಯಾಲಯಕ್ಕೆ ಉಡುಪಿ ಶಿರಬೀಡಿನ ನಿವಾಸಿಗಳಾದ ಸಿ.ಎಚ್. ನಾಗರಾಜ್ ರಾವ್ ಹಾಗೂ ಹರೀಶ್ ಭಟ್‌ರವರು ಅರ್ಜಿ ಸಲ್ಲಿಸಿದ್ದಾರೆ. ಈ ವಿವಾದದಲ್ಲಿ ಸಾರ್ವಜನಿಕರಿಗೆ ಅಹವಾಲು ಮಂಡಿಸಲು ಅವಕಾಶ ನೀಡುಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಪುತ್ತಿಗೆ ಮಠಾಧೀಶರಿಗೆ ವಿವರಣೆಯನ್ನು ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮಠದ ಪರವಾಗಿ ಹಿರಿಯ ವಕೀಲರಾದ ಅದಮಾರು ಶ್ರೀಪತಿ ಆಚಾರ್ಯರವರು ವಿವರಣೆ ನೀಡಲು 3 ದಿನಗಳ ಕಾಲಾವಕಾಶ ಕೋರಿದ್ದು, ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದೆ.

ಸಲ್ಲಿಸಿರುವ ಅರ್ಜಿಗೆ ಪ್ರತ್ಯುತ್ತರವಾಗಿ ಅಷ್ಟಮಠದಲ್ಲಿ ನಡೆದ ಸಭೆಯ ವಿವರಣೆ, ನಿರ್ಣಯಗಳು, ಅಲ್ಲದೆ, 1997ರಲ್ಲಿ ವಿದ್ಯಾಮಾನ್ಯ ತೀರ್ಥರು ಪುತ್ತಿಗೆ ಶ್ರೀಗಳಿಗೆ ಬರೆದ ಪತ್ರ, ಹೀಗೆ ಮುಖ್ಯವಾದ 20 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಶ್ರೀಪತಿ ಆಚಾರ್ಯರವರು ತಿಳಿಸಿದರು.
ಮತ್ತಷ್ಟು
ಐಸಿಐಸಿಐ ಬ್ಯಾಂಕ್: ಕೆಟ್ಟಮೇಲೆ ಬುದ್ದಿ ಬಂತು
ಬಿಜೆಪಿಯಲ್ಲಿ ಸ್ಫೋಟಿಸಿರುವ ಆಂತರಿಕ ಭಿನ್ನಮತ
ರಾಜ್ಯದ ಪುನರ್ವಿಂಗಡಿತ ಕ್ಷೇತ್ರದಲ್ಲೂ ಚುನಾವಣೆ
ಎಸ್.ಎಂ.ಕೃಷ್ಣ: ರಾಜಭವನ ಬೋರ್, ರಾಜ್ಯಕ್ಕೆ ಬರುವೆ
ವಿಧಾನಸಭಾ ಚುನಾವಣೆಯ ಬಳಿಕ ಪಾಲಿಕೆ ಚುನಾವಣೆ
ಷರೀಫ್ ವಿಧಾನಸಭೆಗೆ ಸ್ಪರ್ಧಿಸುವ ಚಿಂತನೆ