ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೆ ನೇಮಕಾತಿ ವಿರುದ್ಧ ರಕ್ಷಣಾ ವೇದಿಕೆ ಪ್ರತಿಭಟನೆ
ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಒಂದಲ್ಲ ಒಂದು ಕಾರಣದಿಂದ ಗಮನ ಸೆಳೆಯುತ್ತಾರೆ. ಈಗ ಅಂತಹದ್ದೇ ಒಂದು ತೊಂದರೆಗೆ ಸಿಲುಕಿದ್ದಾರೆ. ಕರ್ನಾಟಕ ರೈಲ್ವೆ ಇಲಾಖೆಯ ಗ್ರೂಪ್ ಡಿ ಹುದ್ದೆಗಳಿಗೆ ಇದೇ ತಿಂಗಳ 29ರಂದು ಅರ್ಹತಾ ಪರೀಕ್ಷೆ ನಡೆಯಲಿದ್ದು, ಖಾಲಿ ಇರುವ 4,700 ಹುದ್ದೆಗಳಿಗೆ ಸಂಬಂಧಿಸಿದಂತೆ ರೈಲ್ವೆ ಸಚಿವರು ಬಿಹಾರಿಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಬಿಹಾರದಿಂದ ಸುಮಾರು 3,000 ಅಭ್ಯರ್ಥಿಗಳನ್ನು ವಿಶೇಷ ರೈಲಿನ ಮೂಲಕ ರಾಜ್ಯಕ್ಕೆ ಕರೆತರಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.

ರೈಲ್ವೆ ಇಲಾಖೆಯ ಹುದ್ದೆಗಳಿಗೆ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ರಕ್ಷಣಾ ವೇದಿಕೆ ಘೋಷಿಸಿದೆ.

ಈ ಕುರಿತು ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕೇಂದ್ರ ರೈಲ್ವೆ ಇಲಾಖೆಯು ಬಿಹಾರಿಗಳಿಗೆ ಆದ್ಯತೆ ನೀಡಿದ್ದು, ಪರೀಕ್ಷೆಯಲ್ಲಿ ತ್ರಿಭಾಷಾ ಸೂತ್ರದ ನಿಯಮವನ್ನು ಬಿಟ್ಟು, ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರ ನೀಡಲಾಗುತ್ತಿದೆ. ಅಲ್ಲದೆ, ಪರೀಕ್ಷೆಯ ವಿವರವನ್ನು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡದೆ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಈ ಬಗ್ಗೆ ರಾಜ್ಯ ರಾಜಕಾರಣಿಗಳು ಹಾಗೂ ಸಂಸದರು ಮೌನ ವಹಿಸಿರುವುದು ದುರದೃಷ್ಟಕರ. ಇದಕ್ಕೆ ಜನಪ್ರತಿನಿಧಿಗಳು ಸ್ಪಂದಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಪ್ರಚಾರ ಕಾರ್ಯವನ್ನು ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈಲ್ವೆ ಇಲಾಖೆಯ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸದಿದ್ದರೆ ರಾಜ್ಯದ ಎಲ್ಲಾ ರೈಲ್ವೆ ಕೇಂದ್ರಗಳ ಮುಂದೆ ಉಗ್ರ ಪ್ರತಿಭಟನೆ ನಡೆಸಿ, ರೈಲು ಸಂಚಾರಕ್ಕೆ ಅಡ್ಡಿ ಪಡಿಸುವುದಾಗಿ ಅವರು ತಿಳಿಸಿದರು.
ಮತ್ತಷ್ಟು
ಕೋರ್ಟ್ ಮೆಟ್ಟಿಲೇರಿದ ಪರ್ಯಾಯ ವಿವಾದ
ಐಸಿಐಸಿಐ ಬ್ಯಾಂಕ್: ಕೆಟ್ಟಮೇಲೆ ಬುದ್ದಿ ಬಂತು
ಬಿಜೆಪಿಯಲ್ಲಿ ಸ್ಫೋಟಿಸಿರುವ ಆಂತರಿಕ ಭಿನ್ನಮತ
ರಾಜ್ಯದ ಪುನರ್ವಿಂಗಡಿತ ಕ್ಷೇತ್ರದಲ್ಲೂ ಚುನಾವಣೆ
ಎಸ್.ಎಂ.ಕೃಷ್ಣ: ರಾಜಭವನ ಬೋರ್, ರಾಜ್ಯಕ್ಕೆ ಬರುವೆ
ವಿಧಾನಸಭಾ ಚುನಾವಣೆಯ ಬಳಿಕ ಪಾಲಿಕೆ ಚುನಾವಣೆ