ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾತೃಭಾಷೆಗೆ ಪ್ರಾಧಾನ್ಯ ನೀಡಬೇಕು: ಮೂರ್ತಿ
PTI
ಕನಿಷ್ಟ ಪಕ್ಷ 10ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಕನ್ನಡ ಮುಂತಾದ ಪ್ರಾದೇಶಿಕ ಭಾಷೆಗಳನ್ನು ಉಳಿಸಬಹುದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್. ಅನಂತಮೂರ್ತಿ ಆಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ದಕ್ಷಿಣ ಪ್ರಾದೇಶಿಕ ಕೇಂದ್ರ ನಗರದಲ್ಲಿ ಆಯೋಜಿಸಿದ್ದ ಸಂಕೇತ, ಸಂವೇದನೆ ಮತ್ತು ಸಂಸ್ಕ್ಕತಿ: ಕ್ರಿ.ಶ. 900ರಿಂದ 1971ರವರೆಗೆ ಭಾರತ ಉಪಖಂಡದಲ್ಲಿ ಭಾಷೆ ಮತ್ತು ಸಾಹಿತಿಗಳ ಅವಲೋಕನ ಕುರಿತ 4 ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಪ್ರಾದೇಶಿಕ ಭಾಷೆಗಳು ಹಿಂದೆ ಸರಿಯುತ್ತಿವೆ. ಇದರಿಂದ ಭವಿಷ್ಯದಲ್ಲಿ ಕನ್ನಡ ಸೇರಿದಂತೆ ಉಳಿದ ಪ್ರಾದೇಶಿಕ ಭಾಷೆಗಳು ಕಣ್ಮರೆಯಾಗುವ ಸಾಧ್ಯತೆಗಳಿವೆ. ಇದಕ್ಕಾಗಿ ಮೊದಲಿಗೆ ನಮ್ಮ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಮಾತನಾಡಿದ ಶಾಂತಿನಿಕೇತನದ ವಿಶ್ವ ಭಾರತೀಯ ಕುಲಪತಿ ಪ್ರೊ. ರಜತ್ಕಾಂತ ರೇ, ದಕ್ಷಿಣ ಏಷ್ಯಾ ಖಂಡದಲ್ಲಿ ಇಂಗ್ಲಿಷ್ ಭಾಷೆ ಪ್ರಾಬಲ್ಯವನ್ನು ಹೊಂದಿದೆ. ಆದರೂ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಮೊದಲಾದ ದೇಶಗಳು ತಮ್ಮ ಮೂಲ ಸಂಸ್ಕ್ಕತಿ, ಸಂಪ್ರದಾಯ, ಭಾಷೆಯನ್ನು ಇಂದಿಗೂ ಉಳಿಸಿಕೊಂಡಿದೆ, ಅದೇ ರೀತಿ ನಾವು ನಮ್ಮ ಪ್ರಾದೇಶಿಕ ಭಾಷೆಗಳಿಗೆ ಮಹತ್ವವನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಹಾರ್ವಡ್ ವಿಶ್ವವಿದ್ಯಾಲಯದ ಪ್ರೊ. ಸುಗತಾ ಬೋಸೆ, ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಸಹಾಯಕ ನಿರ್ದೇಶಕರಾದ ಡಾ. ಎಸ್.ಕೆ. ಅರುಣಿ, ಇತಿಹಾಸ ತಜ್ಞ ಡಾ. ಸೂರ್ಯನಾಥ್ ಕಾಮತ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು
ರೈಲ್ವೆ ನೇಮಕಾತಿ ವಿರುದ್ಧ ರಕ್ಷಣಾ ವೇದಿಕೆ ಪ್ರತಿಭಟನೆ
ಕೋರ್ಟ್ ಮೆಟ್ಟಿಲೇರಿದ ಪರ್ಯಾಯ ವಿವಾದ
ಐಸಿಐಸಿಐ ಬ್ಯಾಂಕ್: ಕೆಟ್ಟಮೇಲೆ ಬುದ್ದಿ ಬಂತು
ಬಿಜೆಪಿಯಲ್ಲಿ ಸ್ಫೋಟಿಸಿರುವ ಆಂತರಿಕ ಭಿನ್ನಮತ
ರಾಜ್ಯದ ಪುನರ್ವಿಂಗಡಿತ ಕ್ಷೇತ್ರದಲ್ಲೂ ಚುನಾವಣೆ
ಎಸ್.ಎಂ.ಕೃಷ್ಣ: ರಾಜಭವನ ಬೋರ್, ರಾಜ್ಯಕ್ಕೆ ಬರುವೆ