ಪರಿಸರ ಸಂರಕ್ಷಣೆ ಮಾಡಬೇಕಾದರೆ ಏನೆಲ್ಲಾ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಆಲೋಚಿಸುವ ಪರಿಸರ ಪ್ರೇಮಿಗಳಿಗೆ ಇಲ್ಲೊಂದು ಹೊಸ ಉಪಾಯವನ್ನು ಕಂಡು ಹಿಡಿಯಲಾಗಿದೆ. ಅದೇನೆಂದರೆ ಹೋಮದಿಂದ ಪರಿಸರ ಸಂರಕ್ಷಣೆ ಮಾಡಬಹುದು ಎಂಬ ಹೊಸ ಅಂಶ ಬೆಳಕಿಗೆ ಬಂದಿದೆ.
ಹೋಮ ಮಾಡುವುದು ಮುಖ್ಯವಾಗಿ ನಮ್ಮ ಕಷ್ಟಗಳ ನಿವಾರಣೆಗಾಗಿ ಎನ್ನುವುದು ಎಲ್ಲರೂ ತಿಳಿದಿರುವ ವಿಷಯ. ಆದರೆ ಇದು ಪರಿಸರವನ್ನು ರಕ್ಷಣೆ ಮಾಡುತ್ತವೆ ಎಂಬುದು ಹೊಸ ವ್ಯಾಖ್ಯಾನ. ಇದನ್ನು ಕಂಡು ಹಿಡಿದವರು ಡಾ. ಪೂರ್ತಿ ಆಚಾರ್ಯ. ಇವರು ಈ ವಿಷಯದ ಕುರಿತು ಸಂಶೋಧನಾ ಮಹಾ ಪ್ರಬಂಧ ರಚಿಸಿ, ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಹೋಮದ ಪ್ರಯೋಜನವನ್ನು ವಿವರಿಸಿದ ಅವರು, ಹಿಮಾಚಲ ಪ್ರದೇಶದ ಉದ್ಗೀತ ಸಾಧನಾ ಸ್ಥಲಿ ಎಂಬಲ್ಲಿ 4ವರ್ಷಗಳ ಅವಧಿ ಕ್ಷೇತ್ರ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಸೋಯಾಬಿನ್ ಗಿಡಗಳಿಗೆ ಹೋಮದ ಬೂದಿಯನ್ನು ಗೊಬ್ಬರವಾಗಿ ಹಾಕಿದಾಗ ಗಿಡಗಳು ಉತ್ತಮವಾಗಿ ಬೆಳೆದವು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೋಮದಿಂದ ಗಿಡಗಳಿಗೆ ಮಾತ್ರವಲ್ಲದೆ, ಅದರಿಂದ ಬಿಡುಗಡೆಯಾಗುವ ಸಹಾಯಕ ಅನಿಲಗಳು ಹಾಗೂ ಶಬ್ದಶಕ್ತಿಯಿಂದ ಪರಿಸರದ ಸ್ವಾಸ್ಥ್ಯವನ್ನು ಕಾಪಾಡಬಹುದು. ಇತ್ತೀಚೆಗೆ ಪರಿಸರ ಮಾಲಿನ್ಯದಿಂದ ಬೀಳುತ್ತಿರುವ ಆಮ್ಲ ಮಳೆ ಮತ್ತು ವಿಷಯುಕ್ತ ಅನಿಲಗಳ ಅಪಾಯವನ್ನು ಹೋಮದಿಂದ ತಡೆಯಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೃದ್ರೌಗ ತಜ್ಞ ಡಾ.ಸಿ.ಎಸ್. ಶರ್ಮಾ, ಲಿಸಮ್ಮೇಳನಳಿ ಸಂಸ್ಥೆಯ ಎಲ್. ಜಿ. ಜ್ಯೌತಿಷ್ಯರವರು ಮೊದಲಾದ ಮಹನೀಯರು ಹಾಜರಿದ್ದರು.
|