ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕಲಿ ಪೊಲೀಸರನ್ನು ಹಿಡಿದ ಅಸಲಿ ಪೊಲೀಸರು
ನಗರದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಸಾರ್ವಜನಿಕರಿಗೆ ವಂಚನೆಯನ್ನು ಮಾಡುತ್ತಿದ್ದ ನಕಲಿ ಪೊಲೀಸರನ್ನು ಬಂಧಿಸುವಲ್ಲಿ ವಿಲ್ಸನ್ ಗಾರ್ಡನ್ ವಿಶೇಷ ತಂಡ ವಿಜಯ್ಸಾಗರ್ ಹೋಟೆಲ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸಿಯಾಯಿತು.

ನಗರದ ಹೊರವಲಯದ ವೈಟ್ ಫೀಲ್ಡ್ ಪಕ್ಕದ ಕಾಟಮ್ಮನೆಲ್ಲೂರು ಗ್ರಾಮದ ಲೂರ್ದನಾದನ್ ಎಂಬ ನಕಲಿ ಪೊಲೀಸ್ ಬೆಂಗಳೂರು ನಗರ, ಕೆಜಿಎಫ್, ದೇವನಹಳ್ಳಿ, ದೊಡ್ಡ ಬಳ್ಳಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸ್ ವೇಷ ಧರಿಸಿ ಸಾರ್ವಜನಿಕರನ್ನು ಹಾಗೂ ಕಂಪೆನಿಗಳಿಗೆ ವಂಚನೆ ಮಾಡುತ್ತಿದ್ದನು.

ಲೂರ್ದನಾದನ್ ತನ್ನ ಮೋಟಾರ್ ಸೈಕಲ್‌ನಲ್ಲಿ ಪೊಲೀಸ್ ಎಂದು ಬರೆದುಕೊಂಡಿದ್ದು, ಸರ್ಕಾರಿ ವಾಹನದ ರೀತಿಯಲ್ಲಿ ನೋಂದಣಿ ಸಂಖ್ಯೆಯನ್ನು ಬರೆದುಕೊಂಡಿದ್ದನು. ಜನರಿಗೆ ತಾನು ಪೊಲೀಸ್ ಎಂದು ನಂಬಿಸುತ್ತಾ ಐಟಿ, ಇಸ್ರೋ ಮುಂತಾದ ಕಡೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ. ಅಲ್ಲದೆ ನಕಲಿ ಪೊಲೀಸ್ ಎಂಬ ಅನುಮಾನ ಬಾರದಂತೆ ಈತ ಸಮವಸ್ತ್ತ್ರದ ತೋಳಿನಲ್ಲಿ ಮುಖ್ಯ ಪೇದೆ ಹಾಕಿಕೊಳ್ಳುವ ಕೋರ್, ಮೊನೋಗ್ರಾಮ್ ಇರುವ ಹೆಲ್ಮೆಟ್‌ಗಳನ್ನು ಧರಿಸುತ್ತಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಎನ್.ಎಸ್. ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಕಲಿ ಪೊಲೀಸನ ಉಪಟಳದ ಬಗ್ಗೆ ವ್ಯಾಪಕವಾಗಿ ಬಂದ ದೂರುಗಳ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಎಸಿಪಿ ಆರೋಪಿಯನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಿತ್ತು. ಆತನ ಬಳಿ ಇದ್ದ ಹೊಂಡಾ ಯೂನಿಕಾರ್ನ್ ಮೋಟಾರ್ ಸೈಕಲ್ಲನ್ನು ವಶಪಡಿಸಿಕೊಳ್ಳಲಾಯಿತು.
ಮತ್ತಷ್ಟು
ಗೆಲ್ಲುವ ಅಭ್ಯರ್ಥಿಯೇ ಕಣಕ್ಕೆ : ದೇವೇಗೌಡ
ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಇಲ್ಲ: ಯಡಿಯೂರಪ್ಪ
ಹೋಮದಿಂದ ಪರಿಸರ ಸಂರಕ್ಷಣೆ ಸಾದ್ಯ
ಮಾತೃಭಾಷೆಗೆ ಪ್ರಾಧಾನ್ಯ ನೀಡಬೇಕು: ಮೂರ್ತಿ
ರೈಲ್ವೆ ನೇಮಕಾತಿ ವಿರುದ್ಧ ರಕ್ಷಣಾ ವೇದಿಕೆ ಪ್ರತಿಭಟನೆ
ಕೋರ್ಟ್ ಮೆಟ್ಟಿಲೇರಿದ ಪರ್ಯಾಯ ವಿವಾದ