ಬೆಂಗಳೂರು ಚಿನ್ಮಯಿ ಮಿಷನ್ ವತಿಯಿಂದ ಜನವರಿ 7 ರಿಂದ 9ರವರೆಗೆ ಗೀತಜ್ಞಾನ ಯಜ್ಞ ಎಂಬ ಕಾರ್ಯಕ್ರಮವನ್ನು ಜಯನಗರದದ ಎನ್.ಎಂ.ಕೆ.ಆರ್.ವಿ. ಕಾಲೇಜಿನಲ್ಲಿ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಟಿ.ಎಸ್. ವೆಂಕಟಾಚಲಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ತೇಜೋಮಯನಂದ ಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.ಈ ಪ್ರಯುಕ್ತ ಪ್ರತಿದಿನ ಸಂಜೆ 6 ಗಂಟೆಗೆ ಭಗವದ್ಗೀತೆಯ 14ನೇ ಅಧ್ಯಾಯ ಮತ್ತು ಬೆಳಿಗ್ಗೆ 7 ಗಂಟೆಗೆ ಚತುಷ್ಲೋಕಿ ಭಾಗವತ ವಿಷಯದ ಕುರಿತು ಪ್ರವಚನ ನೀಡಲಾಗುವುದು ಎಂದ ಅವರು, ಭಾರತದ ಇತಿಹಾಸ ಮತ್ತು ಸಂಸ್ಕ್ಕತಿಯನ್ನು ಬಿಂಬಿಸುವ ವೇದ, ಉಪನಿಷತ್, ಭಗವದ್ಗೀತೆಗಳ ಪ್ರಚಾರವೇ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸಂಸ್ಥೆಯ ಕಾರ್ಯವೈಖರಿ ಕುರಿತು ಮಾತನಾಡಿದ ಅವರು, ವ್ಯಕ್ತಿತ್ವ ವಿಕಾಸಕ್ಕೆ ಅನುಕೂಲವಾಗುವಂತಹ ಅಂಗ ಸಂಸ್ಥೆಗಳಾದ ಬಾಲ ವಿಹಾರ ಯುವಕೇಂದ್ರ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಸಮಾಜ ಸುಧಾರಣೆಯೆ ಸಂಸ್ಥೆಯ ಮುಖ್ಯ ಗುರಿ ಎಂದು ತಿಳಿಸಿದರು.
|