ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರಿನಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳ ಬಂಧನ
ನಕ್ಸಲಿಯರ ತಾಣವಾಗಿದ್ದ ದಕ್ಷಿಣ ಕನ್ನಡದಲ್ಲಿ ಈಗ ಎಲ್‌ಟಿಟಿ ಉಗ್ರಗಾಮಿಗಳು ನೆಲೆಸಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದ್ದು, ಪೊಲೀಸರು ಸೆರೆಹಿಡಿದ ಇಬ್ಬರು ಎಲ್‌ಟಿಟಿಇ ಉಗ್ರಗಾಮಿಗಳಿಂದ ಈ ಮಾಹಿತಿ ಲಭ್ಯವಾಗಿದೆ.

ನಕಲಿ ಕ್ರೆಡಿಟ್‌ಕಾರ್ಡ್ ಬಳಸಿಕೊಂಡು ನಿಗೂಢವಾಗಿ ವಂಚನೆ ಮಾಡುತ್ತಿದ್ದ ಇಬ್ಬರು ಎಲ್‌ಟಿಟಿಇ ಉಗ್ರಗಾಮಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಇವರು ಮೂಲತಃ ಶ್ರೀಲಂಕಾ ಉತ್ತರ ಜಾಫ್ನಾ ನಿವಾಸಿಗಳಾಗಿದ್ದು, ಬಾಲರೂಬನ್ ಮತ್ತು ನಲ್ಲತಂಬಿ ಜಯಶೀಲನ್ ಎಂದು ಗುರುತಿಸಲಾಗಿದೆ.

ನಕಲಿ ಕ್ರೆಡಿಟ್‌ಕಾರ್ಡ್ ಬಳಸಿಕೊಂಡು ಚಿನ್ನ ಖರೀದಿಸಿ ಮಾರಾಟ ಮಾಡುತ್ತಿದ್ದರು. ಇವರಿಂದ 11ನಕಲಿ ಕ್ರೆಡಿಟ್‌ಕಾರ್ಡ್ ಹಾಗೂ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನ, ನಕಲಿ ಪಾಸ್‌ಪೋರ್ಟ್ ಮುಂತಾದವುಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ.

ಈ ಹಣದಿಂದ ಎಲ್‌ಟಿಟಿಇ ಉಗ್ರಗಾಮಿಗಳ ಸಂಘಟನೆಯನ್ನು ಬೆಳೆಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಈ ಎಲ್ಲಾ ಘಟನೆಗಳಿಗೆ ಮೂಲ ಸೂತ್ರದಾರನಾಗಿದ್ದ ಕುಮಾರ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಪ್ರಸ್ತುತ ಈತ ವಿದೇಶಿ ಪ್ರಯಾಣದಲ್ಲಿದ್ದು, ಆಗಾಗ ಬೆಂಗಳೂರಿಗೆ ಭೇಟಿ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಹಿಂದೆಯೇ ಈ ಇಬ್ಬರೂ ಉಗ್ರಗಾಮಿಗಳು ಎರಡು ಬಾರಿ ಮಂಗಳೂರಿಗೆ ಭೇಟಿ ನೀಡಿದ್ದು, ಮೂರನೇ ಭೇಟಿಯ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ಮಾರ್ಗದರ್ಶನದಂತೆ ವಿಶೇಷ ದಳದ ನೇತೃತ್ವ ವಹಿಸಿರುವ ಪೊಲೀಸ್ ಅಧಿಕಾರಿ ವಿ. ಜಯಂತ್ ಶೆಟ್ಟಿಯವರು ಈ ಇಬ್ಬರೂ ಉಗ್ರಗಾಮಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇವರಿಬ್ಬರು ಕುಮಾರ್‌ನ ಏಜೆಂಟರಾಗಿ ಕೆಲಸ ನಿರ್ವಹಿಸುತ್ತಿದ್ದು, ಬಂದ ಹಣವನ್ನು ಶ್ರೀಲಂಕಾದ ಎಲ್‌ಟಿಟಿಇ ಉಗ್ರಗಾಮಿ ಸಂಘಟನೆಗೆ ಕಳುಹಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಮತ್ತಷ್ಟು
ಚಿನ್ಮಯಿ ಮಿಷನ್ ವತಿಯಿಂದ ಗೀತಜ್ಞಾನ ಯಜ್ಞ
ನಕಲಿ ಪೊಲೀಸರನ್ನು ಹಿಡಿದ ಅಸಲಿ ಪೊಲೀಸರು
ಗೆಲ್ಲುವ ಅಭ್ಯರ್ಥಿಯೇ ಕಣಕ್ಕೆ : ದೇವೇಗೌಡ
ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಇಲ್ಲ: ಯಡಿಯೂರಪ್ಪ
ಹೋಮದಿಂದ ಪರಿಸರ ಸಂರಕ್ಷಣೆ ಸಾದ್ಯ
ಮಾತೃಭಾಷೆಗೆ ಪ್ರಾಧಾನ್ಯ ನೀಡಬೇಕು: ಮೂರ್ತಿ