ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಾಹ್ಮಣರಲ್ಲಿ ಜಾಗೃತಿ ಮೂಡಬೇಕು:ದಿನೇಶ್
ನಮ್ಮ ಸಮಾಜದಲ್ಲಿ ಜಾತಿ ಮೀಸಲಾತಿ ಇರುವವರೆಗೂ ಸಮಾನ ಸ್ಥಾನಮಾನಕ್ಕಾಗಿ ಬ್ರಾಹ್ಮಣರಲ್ಲಿ ಜಾಗೃತಿ, ಸಂಘಟನೆ, ಬಹಿರಂಗ ಹೋರಾಟ ನಡೆಯಬೇಕು ಎಂದು ಮಾಜಿ ಶಾಸಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅಖಿಲ ಭಾರತ ಚಾಣಕ್ಯ ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಬ್ರಾಹ್ಮಣರಿಗೆ ರಾಜಕೀಯ ಮೀಸಲಾತಿ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು, ಈ ಸಮಾಜದಿಂದ ಬಂದಿರುವ ನಾವು ಸಮಾಜದಿಂದ ಪಾಲು ಕೇಳಲು ಹಕ್ಕಿದೆ. ಮೀಸಲಾತಿ ಮತ್ತು ಜಾತಿ ಎಂಬ ಅಂಶಗಳು ನಮ್ಮ ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಎಲ್ಲದಕ್ಕೂ ಮತ್ತು ಎಲ್ಲದರಲ್ಲೂ ಮೀಸಲಾತಿ ಇದೆ. ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ಕೂಡಾ ಅವರು ಆರ್ಥಿಕವಾಗಿ ದುರ್ಬಲರಾಗಿದ್ದರೆ ಚುನಾವಣೆಯಲ್ಲಿ ಮೀಸಲಾತಿ ಇದೆ. ಬ್ರಾಹ್ಮಣರಿಗೂ ಈ ಸೌಲಭ್ಯ ಸಿಗಬೇಕು ಎಂದು ನುಡಿದರು.

ಸಂಕಿರಣವನ್ನು ಉದ್ಘಾಟಿಸಿದ ಪಾವಗಡ ಪ್ರಕಾಶ್ ರಾವ್ ಅವರು ಮಾತನಾಡುತ್ತಾ, ನಮಗೆ ಎಲ್ಲ ಕೆಲಸಗಳಿಗೂ ರಾಜಕೀಯ ಬೇಕು, ರಾಜಕಾರಣಿ ಇರಬೇಕು. ಆದ್ದರಿಂದ ನಾವು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ಅಗತ್ಯವಿದೆ. ಮುಂದುವರೆದ ಜನಾಂಗವೆಂದು ಕರೆಯಲ್ಪಟ್ಟ ಬ್ರಾಹ್ಮಣರನ್ನು ಬಿಟ್ಟು ರಾಜಕೀಯ ಮಾಡಿದರೆ ಗೆಲ್ಲುವುದು ಕಷ್ಟ ಎಂಬುದು ಮಾಯಾವತಿಯಂಥ ನಾಯಕಿಗೂ ಗೊತ್ತಿದೆ. ಬ್ರಾಹ್ಮಣ ಸಮುದಾಯ ಇದನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ನುಡಿದರು.

ಬ್ರಾಹ್ಮಣ ರಾಜಕಾರಣಿಗಳ ಹೊರತಾಗಿ ಉಳಿದೆಲ್ಲ ರಾಜಕಾರಣಿಗಳೂ ತಮ್ಮ ಜಾತಿಯನ್ನು ಹಿಡಿದುಕೊಂಡೇ ಗೆಲ್ಲುತ್ತಾರೆ. ಜಾತಿ ಅಂತ ಹೇಳೋದು ಇಂದು ಆನೆಯ ಬಲವನ್ನು ಕೊಡುತ್ತಾ ಇದೆ. ಬ್ರಾಹ್ಮಣ ರಾಜಕಾರಣ ಬಲಗೊಳ್ಳದೇ ಇದ್ದರೆ ದೇಶವೇ ಬಡವಾಗುತ್ತದೆ ಎಂದು ತಿಳಿಸಿದ ಪ್ರಕಾಶ್ ರಾವ್, ಕರ್ನಾಟಕದ ಪ್ರಪ್ರಥಮ ರಾಜರು ಬ್ರಾಹ್ಮಣರು; ಕದಂಬರು, ವಿಜಯ ನಗರ ಸಾಮ್ರಾಜ್ಯದ ಅರಸರು, ಹೊಯ್ಸಳ ವಿಷ್ಣುವರ್ಧನ ಇವರೆಲ್ಲ ಹೆಸರು ಮಾಡಿದ ದೊರೆಗಳಾಗಿದ್ದಾರೆ ಎಂಬ ವಿಷಯವನ್ನು ಮಂಡಿಸಿದರು.

ಅಖಿಲ ಭಾರತ ಚಾಣಕ್ಯ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಮತ್ತು ಸಂಚಾಲಕರಾದ ಎಚ್.ಜಿ.ಲಕ್ಷ್ಮೀನಾರಾಯಣ ಸ್ವಾಗತ ಭಾಷಣ ಮಾಡಿದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ವಿ.ಶಂಕರನಾರಾಯಣ, ಸಂಘದ ಅಧ್ಯಕ್ಷ ಆರ್. ಪ್ರಕಾಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು
ನ್ಯಾಯಾಲಯ ಮೆಟ್ಟಿಲೇರಿದ ವಿವಾದ - ವಿಶ್ವೇಶ ತೀರ್ಥರ ಅಸಮಾಧಾನ
ಮಂಗಳೂರಿನಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳ ಬಂಧನ
ಚಿನ್ಮಯಿ ಮಿಷನ್ ವತಿಯಿಂದ ಗೀತಜ್ಞಾನ ಯಜ್ಞ
ನಕಲಿ ಪೊಲೀಸರನ್ನು ಹಿಡಿದ ಅಸಲಿ ಪೊಲೀಸರು
ಗೆಲ್ಲುವ ಅಭ್ಯರ್ಥಿಯೇ ಕಣಕ್ಕೆ : ದೇವೇಗೌಡ
ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಇಲ್ಲ: ಯಡಿಯೂರಪ್ಪ