ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರ್ಯಾಯ ವಿವಾದ: ಕೋರ್ಟ್ ವಿಚಾರಣೆ ಇಂದು
ಉಡುಪಿ ಪರ್ಯಾಯ ವಿವಾದ ಮತ್ತು ಶ್ರೀಕೃಷ್ಣ ಪೂಜೆ ಕುರಿತ ವಿವಾದ ವಿಚಾರಣೆಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇಂದು ಕೈಗೆತ್ತಿಕೊಳ್ಳಲಿದ್ದು, ಕುತೂಹಲ ಮೂಡಿಸಿದೆ.

ಈ ವಿವಾದ ಕೋರ್ಟ್ ಮೆಟ್ಟಲೇರಿರುವುದು ಭಕ್ತಸಮುದಾಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ವಪ್ರತಿಷ್ಠೆಯ ಪ್ರಶ್ನೆಯಾಗಿರುವ ಶ್ರೀಕೃಷ್ಣ ಪೂಜೆ ವಿವಾದಕ್ಕೆ ಶೀಘ್ರದಲ್ಲೇ ಸೂಕ್ತ ಪರಿಹಾರ ಸಿಗಲಿದೆ ಎಂಬ ಆಶಾಭಾವನೆಯನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣ ಹಾಗೂ ಶ್ರೀಕೃಷ್ಣ ಪೂಜೆ ವಿವಾದದ ಶಮನಕ್ಕೆ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ, ಹವನಗಳನ್ನು ಹಮ್ಮಿಕೊಳಲಾಗಿತ್ತು.

ಪರ್ಯಾಯ ಪೀಠದ ವಿವಾದ ಬಗೆಹರಿಯಲು ಪರ್ಯಾಯ ಮಾರ್ಗ ಮಂದವಾಗಿರುವ ದಿಶೆಯಲ್ಲಿ ಇದೀಗ ಶ್ರೀಕೃಷ್ಣನಿಗೇ ಮೊರೆಹೋಗಿದ್ದಾಗಿ ಮಠಾಧೀಶರು ತಿಳಿಸಿದ್ದರು. ಪೂಜೆ ಮತ್ತು ಹವನ ಕಾರ್ಯಕ್ರಮದಲ್ಲಿ ಅಷ್ಟ ಮಠದ ಆರು ಮಠಾಧೀಶರು ಭಾಗವಹಿಸಿದ್ದು ವಿಶೇಷವಾಗಿತ್ತು.
ಮತ್ತಷ್ಟು
ಸಂಗೂರು: ಕಬ್ಬು ಅರೆಯಲು ಸೂಚನೆ, ಬಂದ್ ಹಿಂತೆಗೆತ
ಬ್ರಾಹ್ಮಣರಲ್ಲಿ ಜಾಗೃತಿ ಮೂಡಬೇಕು:ದಿನೇಶ್
ನ್ಯಾಯಾಲಯ ಮೆಟ್ಟಿಲೇರಿದ ವಿವಾದ - ವಿಶ್ವೇಶ ತೀರ್ಥರ ಅಸಮಾಧಾನ
ಮಂಗಳೂರಿನಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳ ಬಂಧನ
ಚಿನ್ಮಯಿ ಮಿಷನ್ ವತಿಯಿಂದ ಗೀತಜ್ಞಾನ ಯಜ್ಞ
ನಕಲಿ ಪೊಲೀಸರನ್ನು ಹಿಡಿದ ಅಸಲಿ ಪೊಲೀಸರು