ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೆ ನೇಮಕಾತಿ: ಪ್ರತಿಭಟನೆ ಮುಂದುವರಿಕೆ
ರೈಲ್ವೆ ನೇಮಕಾತಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಎಲ್ಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ರೈಲ್ವೆ ಇಲಾಖೆ ಡಿ ಗ್ರೂಪ್ ದರ್ಜೆಯ ನೇಮಕಾತಿಯಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸುತ್ತಿದೆಯೆಂದು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಂಗಳೂರಿನಲ್ಲಿ ರೈಲ್ವೆ ನೇಮಕಾತಿ ಮಂಡಳಿಗೆ ಮುತ್ತಿಗೆ ಹಾಕಿ ಪರೀಕ್ಷೆಗೆ ಅಡ್ಡಿಪಡಿಸಿದರು

ಬಿಹಾರಿಗಳಿಗೆ ಉದ್ಯೋಗ ನೀಡುವುದರ ಕುರಿತು ಈಗಾಗಲೇ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ಪ್ರತಿಭಟನೆಯ ಕುರಿತು ರೈಲ್ವೆ ಇಲಾಖೆಯು ಇದುವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲವಾದ್ದರಿಂದ ಪ್ರತಿಭಟನೆ ತೀವ್ರವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಒಂದು ಕಡೆ ರೈಲ್ವೆ ನೇಮಕಾತಿ ಕುರಿತಂತೆ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆ, ಇನ್ನೊಂದೆಡೆ ಈ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಕುರಿತು ಕೇಂದ್ರದ ಮಾಜಿ ಸಚಿವೆ ಡಾ. ಸರೋಜಿನಿ ಮಹಿಷಿ ಅವರು, ಒಂದು ವಾರದೊಳಗೆ ಪ್ರಧಾನ ಮಂತ್ರಿ ಹಾಗೂ ರೈಲ್ವೆ ಸಚಿವರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಬೇರೆ ರಾಜ್ಯದ ರೈಲ್ವೆ ಇಲಾಖೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ಕರ್ನಾಟಕಲ್ಲಿ ಕಳೆದ ಒಂದೂವರೆ ದಶಕಗಳಿಂದ ಕನ್ನಡಿಗರನ್ನು ನಿರ್ಲಕ್ಷಿಸಲಾಗಿದೆ. ಈ ಅನ್ಯಾಯದ ವಿರುದ್ಧ ಇದುವರೆಗೆ ಕನ್ನಡಿಗರು ಸುಮ್ಮನಿರುವುದು ತಮಗೆ ಅಸಮಾಧಾನವಾಗಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ಪರ್ಯಾಯ ವಿವಾದ: ಕೋರ್ಟ್ ವಿಚಾರಣೆ ಇಂದು
ಸಂಗೂರು: ಕಬ್ಬು ಅರೆಯಲು ಸೂಚನೆ, ಬಂದ್ ಹಿಂತೆಗೆತ
ಬ್ರಾಹ್ಮಣರಲ್ಲಿ ಜಾಗೃತಿ ಮೂಡಬೇಕು:ದಿನೇಶ್
ನ್ಯಾಯಾಲಯ ಮೆಟ್ಟಿಲೇರಿದ ವಿವಾದ - ವಿಶ್ವೇಶ ತೀರ್ಥರ ಅಸಮಾಧಾನ
ಮಂಗಳೂರಿನಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳ ಬಂಧನ
ಚಿನ್ಮಯಿ ಮಿಷನ್ ವತಿಯಿಂದ ಗೀತಜ್ಞಾನ ಯಜ್ಞ