ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಕ್ಕೆ ಕೇಂದ್ರದ ಕೊಡುಗೆ "ಕತ್ತಲೆ"ಗೆ ಚಾಲನೆ
ಕೇಂದ್ರ ಸರಕಾರವು ಇತ್ತೀಚೆಗಷ್ಟೆ ಕರ್ನಾಟಕಕ್ಕೆ ವಿದ್ಯುತ್ ಕಡಿತಗೊಳಿಸಿರುವುದರ ಪರಿಣಾಮ ಈಗಿನಿಂದಲೇ ಕಾಣಲು ಪ್ರಾರಂಭವಾಗಿದೆ. ಆ ಪ್ರಯುಕ್ತ ಬೆಂಗಳೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ.

ರಾಜ್ಯದಲ್ಲಿ ವಿದ್ಯುತ್ ಅಭಾವ ಎದುರಿಸುತ್ತಿರುವ ಬಗ್ಗೆ ಈ ಹಿಂದೆಯೇ ರಾಜ್ಯವು ಕೇಂದ್ರಕ್ಕೆ ಹೆಚ್ಚುವರಿ ವಿದ್ಯುತ್ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಕೇಂದ್ರವು ರಾಜ್ಯಕ್ಕೆ 150 ಮೆಗಾವ್ಯಾಟ್ ವಿದ್ಯುತ್ ಕಡಿತಗೊಳಿಸಿ, ತಮಿಳುನಾಡಿಗೆ 300 ಮೆಗಾವ್ಯಾಟ್ ಹೆಚ್ಚುವರಿಯಾಗಿ ನೀಡಿದೆ.

ಕರ್ನಾಟಕಕ್ಕೆ ಮಾತ್ರವಲ್ಲದೆ, ಆಂಧ್ರಪ್ರದೇಶ ಮತ್ತು ಕೇರಳಕ್ಕೂ ವಿದ್ಯುತ್ ಕಡಿತಗೊಳಿಸಿದೆ. ರಾಜ್ಯದಲ್ಲಿನ ವಿದ್ಯುತ್ ಕೊರತೆ ಬಗ್ಗೆ ಈಗಾಗಲೇ ಕರ್ನಾಟಕ ರಾಜ್ಯಪಾಲರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 123 ದಶಲಕ್ಷ ಯೂನಿಟ್ ವಿದ್ಯುತ್ ಉಪಯೋಗಿಸುತ್ತಿದ್ದು, ಬೇಸಿಗೆಯಲ್ಲಿ ಅದು 150 ದಶಲಕ್ಷ ಯೂನಿಟ್ ಆಗಬಹುದೆಂದು ಅಂದಾಜು ಮಾಡಲಾಗಿದೆ. ಇದರಿಂದ ಪ್ರಸ್ತುತ ರಾಜ್ಯವು ಪ್ರತಿದಿನ 500 ಮೆಗಾವ್ಯಾಟ್ ವಿದ್ಯುತ್ ಕೊರತೆ ಅನುಭವಿಸುತ್ತಿದೆ.

ಮಳೆಗಾಲದಲ್ಲಿ ಪಂಜಾಬ್, ಮಧ್ಯಪ್ರದೇಶ ಹಾಗೂ ಟಾಟಾ ಕಂಪೆನಿಗೆ 240 ಮೆಗಾವ್ಯಾಟ್ ವಿದ್ಯುತ್ ನೀಡಲಾಗಿತ್ತು. ಅದನ್ನು ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ನೀಡುವುದಾಗಿ ಅವರು ಹೇಳಿರುವುದರಿಂದ ಅಲ್ಲಿಯವರೆಗೆ ಕಾಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸಲು ಈಗಾಗಲೇ ಕರ್ನಾಟಕದ ಅಧಿಕಾರಿಗಳು ಪಂಜಾಬಿಗೆ ಭೇಟಿ ನೀಡಿದ್ದು, ಹೆಚ್ಚುವರಿಯಾಗಿ 50 ಮೆಗಾವ್ಯಾಟ್ ವಿದ್ಯುತ್ ನೀಡುವ ಭರವಸೆ ದೊರೆತಿದೆ.
ಮತ್ತಷ್ಟು
ರೈಲ್ವೆ ನೇಮಕಾತಿ: ಪ್ರತಿಭಟನೆ ಮುಂದುವರಿಕೆ
ಪರ್ಯಾಯ ವಿವಾದ: ಕೋರ್ಟ್ ವಿಚಾರಣೆ ಇಂದು
ಸಂಗೂರು: ಕಬ್ಬು ಅರೆಯಲು ಸೂಚನೆ, ಬಂದ್ ಹಿಂತೆಗೆತ
ಬ್ರಾಹ್ಮಣರಲ್ಲಿ ಜಾಗೃತಿ ಮೂಡಬೇಕು:ದಿನೇಶ್
ನ್ಯಾಯಾಲಯ ಮೆಟ್ಟಿಲೇರಿದ ವಿವಾದ - ವಿಶ್ವೇಶ ತೀರ್ಥರ ಅಸಮಾಧಾನ
ಮಂಗಳೂರಿನಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳ ಬಂಧನ