ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒತ್ತಡಗಳಿಗೆ ಮಣಿಯದಂತೆ ಗೌಡರ ಆಗ್ರಹ
PTIPTI
ಯಾವುದೇ ಸ್ವರೂಪದ ರಾಜಕೀಯ ಒತ್ತಡಗಳಿಗೆ ಮಣಿದು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಮುಂದೂಡಬೇಡಿ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮನವಿಯೊಂದನ್ನು ಸಲ್ಲಿಸಿರುವ ಅವರು ಯಾವುದೇ ಕಾರಣಕ್ಕೂ ರಾಷ್ಟ್ರಪತಿ ಆಡಳಿತವನ್ನು ಮತ್ತೆ ವಿಸ್ತರಿಸಲು ಅವಕಾಶ ನೀಡದೆ ಮೇ ಅಂತ್ಯದ ಒಳಗಾಗಿ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ರಾಜ್ಯಪಾಲ ರಾಮೇಶ್ವರ ಠಾಕೂರ್‌ರವರನ್ನು ಕೇಳಿಕೊಂಡಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

ನಿಗದಿತ ಅವಧಿಯೊಳಗೆ ಚುನಾವಣೆ ನಡೆಯುವುದೋ ಇಲ್ಲವೋ ಎಂಬ ಬಗ್ಗೆ ಜನಸಾಮಾನ್ಯರೂ ಸೇರಿದಂತೆ ರಾಜಕೀಯ ಪಕ್ಷಗಳಲ್ಲಿ ಅನುಮಾನಗಳು ಮೂಡಿವೆ. ಪಕ್ಷದ ಕಾರ್ಯಕರ್ತರೂ ಗೊಂದಲಗೊಂಡಿದ್ದಾರೆ. ಇದನ್ನು ನಿವಾರಿಸಲು ನಿಗದಿತ ಅವಧಿಯೊಳಗೇ ಚುನಾವಣೆ ನಡೆಸುವುದು ಸೂಕ್ತ ಎಂಬ ಸಲಹೆಯನ್ನು ಗೌಡರು ರಾಜ್ಯಪಾಲರ ಮುಂದೆ ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಜಾರಿಯಲ್ಲಿರುವ ಕ್ಷೇತ್ರಗಳ ಪದ್ಧತಿಯಲ್ಲಾದರೂ ಸರಿ ಅಥವಾ ಕ್ಷೇತ್ರಗಳ ಮರುವಿಂಗಡಣೆ ಅನ್ವಯವಾದರೂ ಸರಿ ಚುನಾವಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ರಾಮೇಶ್ವರ ಠಾಕೂರ್‌ರವರಲ್ಲಿ ಗೌಡರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು ಎಂದು ಸುದ್ದಿಮೂಲಗಳು ತಿಳಿಸಿವೆ.
ಮತ್ತಷ್ಟು
ಕೃಷ್ಣರಿಂದ ಪಕ್ಷದ ಬಲವರ್ಧನೆ: ಖರ್ಗೆ
ಬಿಎಸ್ಪಿಗೆ ಆಡಳಿತ ಸೂತ್ರ : ಸಿಂಧ್ಯಾ ವಿಶ್ವಾಸ
ಹೊಸ ಮುಖಗಳಿಗೆ ಟಿಕೆಟ್: ದೇವೇಗೌಡ
ಚುನಾವಣಾ ಪ್ರಚಾರಕ್ಕೆ ಜೆಡಿಎಸ್ ಸಜ್ಜು
ರಾಜ್ಯಕ್ಕೆ ಕೇಂದ್ರದ ಕೊಡುಗೆ "ಕತ್ತಲೆ"ಗೆ ಚಾಲನೆ
ರೈಲ್ವೆ ನೇಮಕಾತಿ: ಪ್ರತಿಭಟನೆ ಮುಂದುವರಿಕೆ