ಒಂದು ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕದ 21 ಐಎಎಸ್ ಅಧಿಕಾರಿಗಳನ್ನು ಹಠಾತ್ ವರ್ಗ ಮಾಡಬೇಕೆಂದು ಸರ್ಕಾರ ಆದೇಶವನ್ನು ಹೊರಡಿಸಿದೆ. ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ಸಮೀಪಿಸುತ್ತಿದ್ದಂತೆ ಚುನಾವಣಾಧಿಕಾರಿಗಳ ಪರೀಶೀಲನೆಯ ನಂತರ ರಾಜ್ಯಪಾಲರು ಈ ಆದೇಶವನ್ನು ಹೊರಡಿಸಿದ್ದಾರೆ.
ಈ ವರ್ಗಾವಣೆಯಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ದೀಲೀಪ್ ರಾವ್‌ರನ್ನು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಅಧ್ಯಕ್ಷರಾಗಿಯೂ, ಉಷಾ ಗಣೇಶ್‌ರವರನ್ನು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಜಲಸಂಪನ್ಮೂಲ ಇಲಾಖೆ ಮುಖ್ಯಸ್ಥರ ಹುದ್ದೆಗೆ ವರ್ಗಾಯಿಸಲಾಗಿದೆ. ಎ.ಕೆ. ನಾಯಕ್ ಅವರನ್ನು ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೈಗೊಂಡ ಈ ವರ್ಗಾವಣೆಯಲ್ಲಿ ಪ್ರಮುಖರೆಂದರೆ ರಜನಿ ಶ್ರೀ ಕುಮಾರ್- ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಎಲ್.ವಿ. ನಾಗರಾಜನ್- ಕರ್ನಾಟಕ ವಿದ್ಯುತ್ ನಿಗಮ ವ್ಯವಸ್ಥಾಪಕ ನಿರ್ದೇಶಕ, ತಪನ್ ಸೇನಾಪತಿ- ಕರ್ನಾಟಕ ರಾಜ್ಯ ಹಣಕಾಸು ನಿಗಮ ವ್ಯವಸ್ಥಾಪಕ ನಿರ್ದೇಶಕ, ವಿ. ಉಮೇಶ್- ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷ, ಅರವಿಂದ್ ರಿಷ್ಬುದ್- ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ.
ಅಲ್ಲದೆ, ಮದನ್ ಗೋಪಾಲ್, ಎ.ಎಸ್. ಶ್ರೀಕಾಂತ, ಮಹೇಂದ್ರ ಜೈನ್, ಮಹಮ್ಮದ್ ಸನಾಉಲ್ಲಾ, ಗೋಪಾಲಕೃಷ್ಣ ಗೌಡ, ಎಂ.ವಿ ಜಯಂತಿ, ಗಂಗಾರಾಮ್ ಬಡೇರಿಯಾ, ಜಿ.ವಿ. ಕೊಂಗವಾಡ್, ಗೌರವ್ ಗುಪ್ತಾ, ಮಿತಾಸ್, ಬಿ.ಪಿ. ಕನಿರಾಂ, ಶಮೀಮ್ ಭಾನು ಅವರುಗಳು ವರ್ಗಾವಣೆಗೊಂಡ ಪ್ರಮುಖ ಐಎಎಸ್ ಅಧಿಕಾರಿಗಳಾಗಿದ್ದಾರೆ.
ಚುನಾವಣೆ ವ್ಯವಸ್ಥಿತವಾಗಿ ನಡೆಯುವ ಹಿನ್ನೆಲೆಯಲ್ಲಿ ದಿಢೀರ್ ನಿರ್ಧಾರ ಕೈಗೊಂಡ ಚುನಾವಣಾ ಅಧಿಕಾರಿಗಳು ಇನ್ನು ಒಂದು ವಾರದೊಳಗೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ದವಾಗಲಿದೆ ಎಂದು ತಿಳಿದು ಬಂದಿದೆ.
|