ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಲಭವನ ಖಾಸಗೀಕರಣ ಇಲ್ಲ: ಶಾಲಿನಿ ರಜನೀಶ್
ಜವಾಹರ ಬಾಲಭವನ ಖಾಸಗೀಕರಣಗೊಳ್ಳಲಿದೆ ಎಂಬುದು ಕೇವಲ ವದಂತಿ ಎಂದು ಬಾಲಭವನ ಸೊಸೈಟಿ ಅಧ್ಯಕ್ಷೆ ಶಾಲಿನಿ ರಜನೀಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಾಲಭವನ ಹೊಸ ವಿದ್ಯುತ್ ಚಾಲಿತ ಆಟಿಕೆಗಳನ್ನು ಅಳವಡಿಸಲು ಮತ್ತು ರೈಲು ದುರಸ್ತಿಗೊಳಿಸಲು ಯೋಜನೆ ಹಾಕಿದೆ. ಈ ಕಾರ್ಯವನ್ನು ಫನ್ಫೈಲ್ ಸಂಸ್ಥೆಗೆ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬಾಲಭವನದಲ್ಲಿ ಹೊಸ ಆಟಿಕೆಗಳನ್ನು ಅಳವಡಿಸಲು ಈ ಹಿಂದೆ ನೀಡಿದ್ದ ಟೆಂಡರ್ ಮುಕ್ತಾಯಗೊಂಡಿರುವುದರಿಂದ ಹೊಸ ಟೆಂಡರ್ ಕರೆಯಲಾಗಿದೆಯೇ ವಿನಃ ಬಾಲಭವನವನ್ನು ಖಾಸಗೀಕರಣಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಶಾಲಿನಿ ರಜನೀಶ್ ತಿಳಿಸಿದರು.

ಸುಮಾರು 12 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬಾಲಭವನದಲ್ಲಿ ಹೊಸದಾಗಿ 12 ಆಟಿಕೆಗಳನ್ನು ಅಳವಡಿಸಲು ಹಾಗೂ ಸಂಗೀತ ಕಾರಂಜಿ, ಸ್ಕೇಟಿಂಗ್ ರೋಲ್ ಇತ್ಯಾದಿಗಳನ್ನು ವ್ಯವಸ್ಥೆಮಾಡಲು ನಿರ್ಧರಿಸಲಾಗಿದೆ. ಈ ಎಲ್ಲಾ ಕಾರ್ಯಗಳಿಗಾಗಿ ಸುಮಾರು 3 ಕೋಟಿ ರೂ.ವೆಚ್ಚವಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಬಚ್ಚೇಗೌಡ, ನಂಜೆಗೌಡ ಬಿಜೆಪಿಯತ್ತ ಮುಖ
ಇನ್ಫೋಸಿಸ್ ವಾಹನ ಚಾಲಕರ ಪ್ರತಿಭಟನೆ
ಕರ್ನಾಟಕದ ರಾಜಕೀಯಕ್ಕೆ ಎಸ್.ಎಂ.ಕೃಷ್ಣ:
ಹೊಸ ಮುಖಗಳಿಗೆ ಆದ್ಯತೆ: ಪಿ.ಜಿ.ಆರ್.ಸಿಂಧ್ಯಾ
ದೇವೇಗೌಡರಿಗೆ ಜನತೆಯ ಆಶೀರ್ವಾದವಿದೆ: ರೇವಣ್ಣ
ನೇಮಕಾತಿಯಲ್ಲಿ ತಾರತಮ್ಯವಿಲ್ಲ: ರೈಲ್ವೆ ಸ್ಪಷ್ಟನೆ