ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನವರಿ ಅಂತ್ಯಕ್ಕೆ ವಿದ್ಯುತ್ ದರ ಏರಿಕೆ ಸಂಭವ
ವಿದ್ಯುತ್ ದರವನ್ನು ಏರಿಸಲು ನಿರ್ಧರಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿಯು ಈ ತಿಂಗಳ ಅಂತ್ಯದ ವೇಳೆಗೆ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯು ಈಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿಯಾಗಿ ರೂಪಾಂತರಗೊಂಡಿರುವುದರಿಂದ ಮಂಡಳಿಯಲ್ಲಿ ಅಸ್ತಿತ್ವದಲ್ಲಿರುವ ಕಾಯ್ದೆಯ ಅನುಸಾರ ಸಾರ್ವಜನಿಕರಿಗೆ ಹೊರೆಯಾಗದಂತೆ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಕೆ.ಪಿ.ಪಾಂಡೆ ತಿಳಿಸಿದ್ದಾರೆ.

ದರ ಪರಿಷ್ಕರಣರೆಗೆ ಸಂಬಂಧಿಸಿ ಐದು ವಿದ್ಯುತ್ ಕಂಪನಿಗಳು ಮನವಿ ಸಲ್ಲಿಸಿರುವುದರಿಂದ ಇದನ್ನು ಸದ್ಯದಲ್ಲಿಯೇ ಪರೀಶೀಲಿಸಲಾಗುವುದು ಎಂದು ಪಾಂಡೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈಗಿರುವ ದರವನ್ನು 90ಪೈಸೆಯಷ್ಟು ಹೆಚ್ಚಿಸಬೇಕೆಂದು ಈ ಐದು ಕಂಪನಿಗಳು ಬೇಡಿಕೆ ಸಲ್ಲಿಸಿದ್ದು ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಯ ಕಾಯ್ದೆ ಅನ್ವಯದಂತೆ ದರ ಪರಿಷ್ಕರಿಸಲಾಗುವುದು ಎಂದು ಪಾಂಡೆ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಬಾಕಿ ಪಾವತಿ:ಸಂಜಯ್ ಖಾನ್‌ಗೆ ಹೈಕೋರ್ಟ್ ಗಡುವು
ಮುಖ್ಯ ಚುನಾವಣಾ ಆಯುಕ್ತರ ಮಹತ್ವದ ಭೇಟಿ
ರಾಜ್ಯ ಬಜೆಟ್‌ಗೆ ‌ಅಂತಿಮ ಸ್ವರೂಪ
ಕರವೇ ಪ್ರತಿಭಟನೆ: ಪೊಲೀಸರ ಲಾಠಿ ಪ್ರಹಾರ
ರೈಲ್ವೆ ನೇಮಕಾತಿ ವಿವಾದ: ಆಸ್ಕರ್‌ಗೆ ಮುತ್ತಿಗೆ
ಬಾಲಭವನ ಖಾಸಗೀಕರಣ ಇಲ್ಲ: ಶಾಲಿನಿ ರಜನೀಶ್