ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂಗ್ಲ ಪ್ರಾಥಮಿಕ ಶಿಕ್ಷಣ: ನಿಲುವಿಗೆ ಆದೇಶ
ಆಂಗ್ಲ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಣ ಪ್ರಾರಂಭಕ್ಕೆ ಅನುಮತಿ ನೀಡುವಲ್ಲಿ ಸರ್ಕಾರದ ನಿಲುವು ಏನೆಂಬುದನ್ನು ಜನವರಿ 10ರಂದು ತಿಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ಶಿಕ್ಷಣ ಇಲಾಖೆಯು ಆಂಗ್ಲ ಮಾಧ್ಯಮದಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪ್ರಾರಂಭಕ್ಕೆ ಅನುಮತಿ ನೀಡದ ಕ್ರಮವನ್ನು ಪ್ರಶ್ನಿಸಿ ಅನೇಕ ಶಿಕ್ಷಣ ಸಂಸ್ಥೆಗಳು ಅರ್ಜಿಯನ್ನು ಸಲ್ಲಿಸಿದ್ದವು. ಸಂವಿಧಾನದ 350(ಎ) ವಿಧಿಯ ನಿಯಮದ ಪ್ರಕಾರ, ಭಾಷಾ ಅಲ್ಪಾಸಂಖ್ಯಾತರ ರಕ್ಷಣೆ ಮಾಡಬೇಕು ಎಂಬ ಉಲ್ಲೇಖವಿದೆ. ಆದರೆ ಕನ್ನಡ ಹೇರಿಕೆಯಿಂದ ಸರ್ಕಾರ ಇದನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಅರ್ಜಿಯಲ್ಲಿ ಶಿಕ್ಷಣ ಸಂಸ್ಥೆಗಳು ಆರೋಪಿಸಿವೆ.

ಭಾಷಾ ನೀತಿ ಇನ್ನೂ ಚಾಲ್ತಿಯಲ್ಲಿರುವ ಕಾರಣ ನೂತನ ಶಾಲೆಗಳಿಗೆ ನೋಂದಣಿಯನ್ನು ಮಾಡಲಾಗದು ಎಂಬ ಇಲಾಖೆಯ ಹೇಳಿಕೆ ಸರಿಯಲ್ಲ ಎಂದು ನಗರದ ಪಲ್ಲವಿ ಸಾಂಸ್ಕ್ಕತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಹಾಗೂ ಇತರ ಶಿಕ್ಷಣ ಸಂಸ್ಥೆಗಳು ದೂರಿವೆ.

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿಯವರು ಅನುಮತಿ ನಿರಾಕರಣೆ ಮಾಡಿರುವ ಶಿಕ್ಷಣ ಇಲಾಖೆಗೆ ವಿವರಣೆ ನೀಡುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ಜನವರಿ 10ರಂದು ಸರ್ಕಾರದ ತೀರ್ಮಾನ ಏನೆಂಬುದನ್ನು ಅಡ್ವೊಕೇಟ್ ಜನರಲ್ (ಎಜಿ) ಅವರು ವಾದ ಮಂಡಿಸುವಂತೆ ಹೈಕೋರ್ಟ್ ತಿಳಿಸಿದೆ.
ಮತ್ತಷ್ಟು
ಸವಿತಾ ಸಮಾಜದ ಬೇಡಿಕೆಗೆ ಸರ್ಕಾರದ ಸ್ಪಂದನೆ
ಜನವರಿ ಅಂತ್ಯಕ್ಕೆ ವಿದ್ಯುತ್ ದರ ಏರಿಕೆ ಸಂಭವ
ಬಾಕಿ ಪಾವತಿ:ಸಂಜಯ್ ಖಾನ್‌ಗೆ ಹೈಕೋರ್ಟ್ ಗಡುವು
ಮುಖ್ಯ ಚುನಾವಣಾ ಆಯುಕ್ತರ ಮಹತ್ವದ ಭೇಟಿ
ರಾಜ್ಯ ಬಜೆಟ್‌ಗೆ ‌ಅಂತಿಮ ಸ್ವರೂಪ
ಕರವೇ ಪ್ರತಿಭಟನೆ: ಪೊಲೀಸರ ಲಾಠಿ ಪ್ರಹಾರ