ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೆ ನೇಮಕಾತಿ ವಿವಾದ: ಪ್ರತಿಭಟನೆ ತೀವ್ರ
ಕನ್ನಡಿಗರಿಗೆ ರೈಲ್ವೆ ನೇಮಕಾತಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ನಡೆಯುತ್ತಿರುವ ಪ್ರತಿಭಟನೆ ದಿನದಿನಕ್ಕೆ ಉಗ್ರ ರೂಪವನ್ನು ತಾಳುತ್ತಿದೆ. ರಾಜ್ಯದ ರೈಲ್ವೆ ವಲಯದ ಖಾಲಿ ಹುದ್ದೆಗಳಿಗೆ ಬಿಹಾರಿಗಳನ್ನು ನೇಮಿಸಿಕೊಳ್ಳುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ನೈರುತ್ಯ ವಲಯದ ವಿಭಾಗೀಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಟಿ.ಎ. ನಾರಾಯಣಗೌಡ ಬಣದ ಕಾರ್ಯಕರ್ತರು ಏಕಾಏಕಿ ನುಗ್ಗಿ ರೈಲ್ವೆ ಇಲಾಖೆಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಜಡಿದು ಕೆಲಸ ಕಾರ್ಯಗಳಿಗೆ ಅಡ್ಡಿ ಪಡಿಸಿದರು. ಅಲ್ಲದೆ, ಧರಣಿ ನಡೆಸಿ ಕೆಲವು ಕಾಲ ರೈಲು ತಡೆ ಮಾಡಿದ ಕಾರ್ಯಕರ್ತರು, ಕೇಂದ್ರ ಸಚಿವ ಲಾಲೂ ಪ್ರಸಾದ್ ವಿರುದ್ಧ ಘೋಷಣೆಯನ್ನು ಕೂಗಿ ರಾಜ್ಯದಲ್ಲಿ ಖಾಲಿ ಇರುವ ರೈಲ್ವೆ ನೇಮಕಾತಿ ಹುದ್ದೆಗಳಿಗೆ ಕನ್ನಡಿಗರನ್ನು ಮಾತ್ರ ಆಯ್ಕೆ ಮಾಡಬೇಕೆಂದು ಒತ್ತಾಯಪಡಿಸಿದರು.

ಕಾರ್ಯಕರ್ತರು ರೈಲ್ವೆ ನೇಮಕಾತಿ ಪರೀಕ್ಷೆ ನಡೆಯದಂತೆ ಪರೀಕ್ಷೆ ಕೇಂದ್ರಗಳಿಗೆ ನುಗ್ಗಿ ಪರೀಕ್ಷೆಗೆ ಅಡ್ಡಿ ಪಡಿಸಿದರು. ಈಗಾಗಲೇ ಹಲವು ಕನ್ನಡ ಪರ ಸಂಘಗಳು ಹಾಗೂ ಸಂಸ್ಥೆಗಳು ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿವೆ. ಇದಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ಈ ಹೋರಾಟವು ಇನ್ನೂ ತೀವ್ರವಾಗುವ ಸಂಭವವಿದೆ.

ಕಳೆದ ಕೆಲವು ದಿನಗಳಿಂದ ಕರವೇ ಕಾರ್ಯಕರ್ತರು ರೈಲ್ವೆ ನೇಮಕಾತಿ ವಿರುದ್ದ ಪ್ರತಿಭಟನೆಗಳನ್ನು ನಡೆಸುತ್ತಿದೆ. ನೇಮಕಾತಿಯಲ್ಲಿ ಯಾವುದೇ ರೀತಿಯ ತಾರತಮ್ಯ ನೀತಿ ಅನುಸರಿಸಿಲ್ಲ ಎಂದು ರೈಲ್ವೆ ಇಲಾಖೆಯೂ ಈಗಾಗಲೇ ಹೇಳಿಕೆ ನೀಡಿದೆ.

ಹುಬ್ಬಳ್ಳಿ ವರದಿ: ರೈಲ್ವೆ ನೇಮಕಾತಿ ಸಂಬಂಧ ಪ್ರತಿಭಟನೆ ರಾಜ್ಯವ್ಯಾಪಿ ವ್ಯಾಪಿಸಿದ್ದು, ಹುಬ್ಬಳ್ಳಿಯಲ್ಲೂ ನೇಮಕಾತಿಯ ವಿರುದ್ಧ ತೀವ್ರ ಹೋರಾಟವನ್ನು ನಡೆದಿದೆ. ಬಿಹಾರದಲ್ಲಾದರೆ ಬಿಹಾರಿಗಳನ್ನು ನೇಮಕ ಮಾಡಿ, ಆದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿ, ರೈಲ್ವೆ ಇಲಾಖೆಗೆ ಮುತ್ತಿಗೆ ಹಾಕಿ ಇಲಾಖೆಯ ಪಿಠೋಪಕರಣಗಳನ್ನು ಧ್ವಂಸ ಮಾಡಿದರು.
ಮತ್ತಷ್ಟು
ರಾತ್ರಿಯಲ್ಲಿ ನಾಗಾರ್ಜುನ ಕಾಮಗಾರಿಗೆ ತಡೆ
ಮಹದೇವ್ ಕಾಂಗ್ರೆಸ್ ಸೇರ್ಪಡೆಗೆ ವಿರೋಧ
ಆಂಗ್ಲ ಪ್ರಾಥಮಿಕ ಶಿಕ್ಷಣ: ನಿಲುವಿಗೆ ಆದೇಶ
ಸವಿತಾ ಸಮಾಜದ ಬೇಡಿಕೆಗೆ ಸರ್ಕಾರದ ಸ್ಪಂದನೆ
ಜನವರಿ ಅಂತ್ಯಕ್ಕೆ ವಿದ್ಯುತ್ ದರ ಏರಿಕೆ ಸಂಭವ
ಬಾಕಿ ಪಾವತಿ:ಸಂಜಯ್ ಖಾನ್‌ಗೆ ಹೈಕೋರ್ಟ್ ಗಡುವು