ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಪಟ್ಟಿ ದೋಷಕ್ಕೆ ಜಿಲ್ಲಾಧಿಕಾರಿಗಳು ಹೊಣೆ
ರಾಜ್ಯದ ಮತದಾರರ ಪಟ್ಟಿಯಲ್ಲಿನ ಪರಿಷ್ಕರಣೆ ಮತ್ತು ಅದರಲ್ಲಿ ಕಂಡು ಬಂದಿರುವ ಲೋಪದೋಷಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯ ಚುನಾವಣಾ ಆಯುಕ್ತರು ಮತದಾರರ ಪಟ್ಟಿಯಲ್ಲಿ ಲೋಪದೋಷಗಳಿಗೆ ಆಯಾಯ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೂರು ದಿನಗಳ ಭೇಟಿಗಾಗಿ ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ನೇತೃತ್ವದಲ್ಲಿ ಆಗಮಿಸಿರುವ ಆಯೋಗವು ಮತದಾರರ ಪಟ್ಟಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಈ ತಿಂಗಳೊಳಗೆ ಪ್ರಕ್ರಿಯೆಯನ್ನು ಮುಗಿಸಿ ಅಂತಿಮ ಪಟ್ಟಿಯನ್ನು ಸಿದ್ದಪಡಿಸುವಂತೆ ಆದೇಶಿಸಿದೆ.

ರಾಜ್ಯ ಮತದಾರರ ಪಟ್ಟಿ ಪರಿಷ್ಕರಣೆಯ ಕರಡು ಪ್ರತಿಯನ್ನು ಈ ತಿಂಗಳ 10ರಂದು ಪ್ರಕಟಿಸಬೇಕಾಗಿತ್ತು. ಆದರೆ ಪಟ್ಟಿಯಲ್ಲಿ ಹೆಚ್ಚು ದೋಷಗಳು ಕಂಡು ಬಂದಿರುವುದರಿಂದ ಕರಡು ಪ್ರತಿಯನ್ನು ರದ್ದುಗೊಳಿಸಿ ಹೊಸದಾಗಿ ಪಟ್ಟಿ ತಯಾರಿಸುವಂತೆ ಆಯೋಗ ಆದೇಶ ನೀಡಿದೆ. ಅಲ್ಲದೆ, ಶೇ.60ಕ್ಕಿಂತ ಹೆಚ್ಚು ಮತದಾರರಿರುವ ಕಡೆಗಳಲ್ಲಿ ಮಾತ್ರ ಹೊಸ ಸಮೀಕ್ಷೆ ಮಾಡಬೇಕೆಂದು ತಿಳಿಸಿದೆ.

ಈ ಪ್ರಕಾರ ಮುಂದಿನ ತಿಂಗಳು 7ಕ್ಕೆ ಮತದಾರರ ಪಟ್ಟಿಯ ಕರಡು ಪ್ರತಿ ಪ್ರಕಟಿಸಬೇಕು. ಸಾರ್ವಜನಿಕರ ಆಕ್ಷೇಪಣೆಗೆ 15 ದಿನ ಸಮಯ ನೀಡಬೇಕು. ಬಳಿಕ ಅಂತಿಮ ಪಟ್ಟಿಯನ್ನು ಮಾರ್ಚ್ 8ಕ್ಕೆ ಪ್ರಕಟಿಸಬೇಕು. ಇದರಿಂದ ವಿಧಾನಸಭಾ ಚುನಾವಣೆಯು ನಿಗದಿ ಮಾಡಿರುವಂತೆ ಮೇ ತಿಂಗಳಲ್ಲಿ ನಡೆಯುವುದು ಬಹುತೇಕ ನಿಚ್ಚಳವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತ ಚರ್ಚೆ ಇಂದು ಕೂಡ ಮುಂದುವರಿಯುವ ಸಾಧ್ಯತೆಗಳಿವೆ.
ಮತ್ತಷ್ಟು
ನ್ಯಾಯಾಲಯದಲ್ಲಿ ಐಎಎಸ್ ಅಧಿಕಾರಿ ಉಡಾಫೆ
ಅಪಘಾತ: ಮಾಜಿ ಸಚಿವರ ಮಗನ ದುರ್ಮರಣ
ರೈಲ್ವೆ ನೇಮಕಾತಿ ವಿವಾದ: ಪ್ರತಿಭಟನೆ ತೀವ್ರ
ರಾತ್ರಿಯಲ್ಲಿ ನಾಗಾರ್ಜುನ ಕಾಮಗಾರಿಗೆ ತಡೆ
ಮಹದೇವ್ ಕಾಂಗ್ರೆಸ್ ಸೇರ್ಪಡೆಗೆ ವಿರೋಧ
ಆಂಗ್ಲ ಪ್ರಾಥಮಿಕ ಶಿಕ್ಷಣ: ನಿಲುವಿಗೆ ಆದೇಶ