ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾರಾಯಿ ನಿಷೇಧ ವಿಫಲ: ಬಿ.ಆರ್.ಪಾಟೀಲ್
ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಜಾರಿಗೆ ತಂದಿದ್ದ ಸಾರಾಯಿ ನಿಷೇಧ ಕಾನೂನು ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಗುಲ್ಬರ್ಗ ಜಿಲ್ಲೆಯ ಅಳಂದ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಅಂಶವನ್ನು ಹೊರಗೆಡವಿದರಲ್ಲದೆ, ಇದರಲ್ಲಿ ಕೆಲವೊಂದು ಅಧಿಕಾರಿಗಳು ಶಾಮೀಲಾಗಿರುವುದೇ ಈ ಕೃತ್ಯಕ್ಕೆ ಕಾರಣ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಾರಾಯಿ ನಿಷೇಧಿಸಿದ ನಂತರವೂ ಅಕ್ರಮ ಮದ್ಯ ತಯಾರಿಕೆ ನಡೆಯುತ್ತಿದೆಯೇ ಎಂಬುದರ ಜಾಡು ಹಿಡಿಯಲು ಸರ್ಕಾರದ ವತಿಯಿಂದ ಅಧಿಕಾರಿಗಳಿಗೆ ಎಲ್ಲ ರೀತಿಯ ಸೌಲಭ್ಯ ದೊರೆತಿದೆ. ಆದರೆ ಅಬಕಾರಿ ಗುತ್ತಿಗೆದಾರರ ಮೇಲೆ ಅಧಿಕಾರಿಗಳು ದಾಳಿ ಮಾಡದೆ ಲಂಚ ಸ್ವೀಕರಿಸಿ ಸುಮ್ಮನಾಗುತ್ತಿದ್ದಾರೆ. ಇದು ಗುಲ್ಬರ್ಗ ಮಾತ್ರವಲ್ಲದೆ ಬಹಳ ಜಿಲ್ಲೆಗಳಲ್ಲಿ ನಡೆಯುತ್ತಿದೆ ಎಂದು ಪಾಟೀಲ್ ಆರೋಪಿಸಿದರು.

ಹೀಗೆ ಅಕ್ರಮವಾಗಿ ಮಾರಾಟವಾಗುತ್ತಿದೆ ಎನ್ನಲಾದ ಸಾರಾಯಿ ಹಾಗೂ ಮದ್ಯವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಪಾಟೀಲರು, ಇದಕ್ಕೆ ಸಂಬಂಧಿಸಿದ ಅಬಕಾರಿ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ, ಕೆಳಹಂತದ ಅಧಿಕಾರಿಗಳನ್ನು ಕೆಲಸದಿಂದ ತೆಗೆಯಬೇಕು ಎಂದು ಆಗ್ರಹಿಸಿದ್ದೇ ಅಲ್ಲದೇ, ಈ ನಿಟ್ಟಿನಲ್ಲಿ ರಾಜ್ಯಪಾಲರು ಕ್ರಮ ಕೈಗೊಳ್ಳದೆ ಇದ್ದರೆ ಅಬಕಾರಿ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಮತ್ತಷ್ಟು
ರೈಲ್ವೆ : ಕರವೇ ಬೆದರಿಕೆ, ದೈಹಿಕ ಪರೀಕ್ಷೆ ಸ್ಥಗಿತ
ಚುನಾವಣಾ ಪಟ್ಟಿ ದೋಷಕ್ಕೆ ಜಿಲ್ಲಾಧಿಕಾರಿಗಳು ಹೊಣೆ
ನ್ಯಾಯಾಲಯದಲ್ಲಿ ಐಎಎಸ್ ಅಧಿಕಾರಿ ಉಡಾಫೆ
ಅಪಘಾತ: ಮಾಜಿ ಸಚಿವರ ಮಗನ ದುರ್ಮರಣ
ರೈಲ್ವೆ ನೇಮಕಾತಿ ವಿವಾದ: ಪ್ರತಿಭಟನೆ ತೀವ್ರ
ರಾತ್ರಿಯಲ್ಲಿ ನಾಗಾರ್ಜುನ ಕಾಮಗಾರಿಗೆ ತಡೆ