ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೌಡರ ಕಾರಿಗೆ ಡಿಕ್ಕಿ ; ಆತ್ಮಹತ್ಯೆಗೆ ಶರಣು
ಮಾಜಿ ಪ್ರಧಾನಿ ದೇವೇಗೌಡರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮನೆಯವರ ನಿಂದನೆಯನ್ನು ಎದುರಿಸಿದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಂಗಳೂರಿನ ಕದಿರೇನಹಳ್ಳಿಯ ರಮೇಶ್ ಎಂಬುವವನೇ ಈ ದುರ್ದೈವಿಯಾಗಿದ್ದು ತನ್ನ ಮನೆಯ ಕೋಣೆಯಲ್ಲಿ ನೇಣುಹಾಕಿಕೊಳ್ಳುವ ಮೂಲಕ ಆತ ಸಾವಿಗೆ ಶರಣಾಗಿದ್ದಾನೆ.

ದೇವಾಲಯವೊಂದಕ್ಕೆ ಭೇಟಿ ನೀಡಿ ವಾಪಸ್ ಬರುತ್ತಿದ್ದ ಗೌಡರ ಕಾರಿಗೆ ರಮೇಶ್‌ನ ಮಾರುತಿ ಕಾರು ಢಿಕ್ಕಿಹೊಡೆದಾಗ, ಗೌಡರ ಅಂಗರಕ್ಷಕರು ಹಾಗೂ ಬೆಂಬಲಿಗರು ಅವನ ಮೇಲೆ ಹರಿಹಾಯ್ದರು. ಆದರೆ ಮಧ್ಯ ಪ್ರವೇಶಿಸಿದ ಗೌಡರು ಕಾರನ್ನು ದುರಸ್ತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿ ವಾಪಾಸಾಗಿದ್ದರು ಎಂದು ತಿಳಿದುಬಂದಿದೆ.

ಆದರೂ ಆತನ ಮನೆಯವರು ಈ ಕುರಿತು ತೀವ್ರವಾಗಿ ನಿಂದಿಸಿದಾಗ ಮನನೊಂದಿದ್ದ ಹಾಗೂ ಭಯಗ್ರಸ್ತನಾಗಿದ್ದ ಆತ ನೇಣುಹಾಕಿಕೊಂಡ. ಕಿಟಕಿಯಿಂದ ಇದನ್ನು ನೋಡಿದ ಆತನ ಅತ್ತಿಗೆ ಬೊಬ್ಬೆ ಹಾಕಿದಾಗ ಅಕ್ಕಪಕ್ಕದವರು ಸಹಾಯಕ್ಕೆ ಬರುವಷ್ಟರಲ್ಲಿ ಪರಿಸ್ಥಿತಿ ಚಿಂತಾಜನಕವಾಗಿತ್ತು ಎಂದು ಸುದ್ದಿಮೂಲಗಳು ತಿಳಿಸಿವೆ.

ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಮೃತಪಟ್ಟಿದ್ದು ದೃಢವಾಯಿತು. ಕಿಮ್ಸ್ ಆಸ್ಪತ್ರೆಯಲ್ಲಿ ಆತನ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಸಾರಾಯಿ ನಿಷೇಧ ವಿಫಲ: ಬಿ.ಆರ್.ಪಾಟೀಲ್
ರೈಲ್ವೆ : ಕರವೇ ಬೆದರಿಕೆ, ದೈಹಿಕ ಪರೀಕ್ಷೆ ಸ್ಥಗಿತ
ಚುನಾವಣಾ ಪಟ್ಟಿ ದೋಷಕ್ಕೆ ಜಿಲ್ಲಾಧಿಕಾರಿಗಳು ಹೊಣೆ
ನ್ಯಾಯಾಲಯದಲ್ಲಿ ಐಎಎಸ್ ಅಧಿಕಾರಿ ಉಡಾಫೆ
ಅಪಘಾತ: ಮಾಜಿ ಸಚಿವರ ಮಗನ ದುರ್ಮರಣ
ರೈಲ್ವೆ ನೇಮಕಾತಿ ವಿವಾದ: ಪ್ರತಿಭಟನೆ ತೀವ್ರ