ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ರಮ ಗಣಿಗಾರಿಕೆ ; ಚುನಾವಣೆ ನಂತರ ಬಹಿರಂಗ
ಅಕ್ರಮ ಗಣಿಗಾರಿಕೆಯ ಕುರಿತ ತನಿಖೆಯ ಅಂತಿಮ ವರದಿಯನ್ನು ವಿಧಾನ ಸಭಾ ಚುನಾವಣೆಯ ಬಳಿಕ ಪ್ರಕಟಿಸುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತು ನಡೆಸಲಾದ ತನಿಖೆಯು ಏಪ್ರಿಲ್ನಲ್ಲಿ ಪೂರ್ಣಗೊಳ್ಳಲಿದ್ದು, ಅಂತಿಮ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.

ಬಳ್ಳಾರಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಗೆ ಸಂಬಂಧಪಟ್ಟಂತೆ ರಿಮೋಟ್ ಸೆನ್ಸಿಂಗ್ ಸಂಸ್ಥೆಯ ಮೂಲಕ ಸೆಟಲೈಟ್ ಚಿತ್ರ ತೆಗೆಸಲಾಗಿದ್ದು, ಅದರ ಪರೀಶೀಲನೆ ಮುಂದುವರೆದಿದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಕೂಡ ವರದಿ ಸಿದ್ದಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ತನಿಖೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದವರು ಭಾಗಿಯಾಗಿದ್ದಾರೆ. ಆದರೆ ಚುನಾವಣೆಗೆ ಮುನ್ನ ಹೆಸರು ಬಹಿರಂಗಗೊಳಿಸಿದರೆ ಬೇರೆ ರೀತಿಯ ಆರೋಪಗಳು ಬರುವ ಹಿನ್ನೆಲೆಯಲ್ಲಿ ಚುನಾವಣೆ ನಂತರವೇ ತನಿಖೆಯನ್ನು ಬಹಿರಂಗಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಇಬ್ಬರೂ ಮಾಜಿ ಸಚಿವರ ವಿರುದ್ಧದ 150 ಕೋಟಿ. ರೂ.ಗಳ ಆರೋಪದ ತನಿಖೆ ಇದರಲ್ಲಿ ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಬಗ್ಗೆ ಆರೋಪ ಮಾಡಿರುವ ವಿಧಾನ ಪರಿಷತ್ ಸದಸ್ಯ ಜನಾರ್ಧನ ರೆಡ್ಡಿ ಇದುವರೆಗೂ ಲೋಕಾಯುಕ್ತಕ್ಕೆ ಯಾವುದೇ ದೂರನ್ನು ನೀಡಿಲ್ಲ ಎಂದರು.
ಮತ್ತಷ್ಟು
ಗೌಡರ ಕಾರಿಗೆ ಡಿಕ್ಕಿ ; ಆತ್ಮಹತ್ಯೆಗೆ ಶರಣು
ಸಾರಾಯಿ ನಿಷೇಧ ವಿಫಲ: ಬಿ.ಆರ್.ಪಾಟೀಲ್
ರೈಲ್ವೆ : ಕರವೇ ಬೆದರಿಕೆ, ದೈಹಿಕ ಪರೀಕ್ಷೆ ಸ್ಥಗಿತ
ಚುನಾವಣಾ ಪಟ್ಟಿ ದೋಷಕ್ಕೆ ಜಿಲ್ಲಾಧಿಕಾರಿಗಳು ಹೊಣೆ
ನ್ಯಾಯಾಲಯದಲ್ಲಿ ಐಎಎಸ್ ಅಧಿಕಾರಿ ಉಡಾಫೆ
ಅಪಘಾತ: ಮಾಜಿ ಸಚಿವರ ಮಗನ ದುರ್ಮರಣ