ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇ ತಿಂಗಳಲ್ಲಿ ಚುನಾವಣೆ- ಗೋಪಾಲಸ್ವಾಮಿ
ರಾಜ್ಯ ವಿಧಾನಸಭೆಯ ಚುನಾವಣೆ ಬರುವ ಮೇ ತಿಂಗಳ ಅಂತ್ಯಕ್ಕೆ ನಡೆಸಲು ಚುನಾವಣಾ ಆಯೋಗ ಸಿದ್ದವಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎನ್. ಗೋಪಾಲಸ್ವಾಮಿ ಹೇಳಿದ್ದಾರೆ.

ರಾಜ್ಯ ಚುನಾವಣೆ ಸಿದ್ದತೆಗಳ ಪರೀಶೀಲನೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ಕ್ಷೇತ್ರ ಪುನರ್ವಿಂಗಡಣೆಗೂ ಚುನಾವಣಾ ಆಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಮೇ 28ರ ಒಳಗೆ ಚುನಾವಣೆ ನಡೆಸಬೇಕಾಗಿದೆ. ಆ ಪ್ರಕಾರದಂತೆ ಚುನಾವಣೆ ನಡೆಸಲು ಆಯೋಗ ಸಿದ್ದವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರು ದಾಖಲಾಗಿರುವುದು ನಕಲಿ ಎಂದು ಹೇಳುವುದು ಅಸಾಧ್ಯ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿದೆ. ಅಲ್ಲದೆ, ಮತದಾರರ ಪಟ್ಟಿ ತಯಾರಿಕೆಯ ಕಾರ್ಯ ನೋಡಿಕೊಳ್ಳಲು ಈಗಾಗಲೇ 12 ವೀಕ್ಷಕರನ್ನು ನೇಮಿಸಲಾಗಿದೆ. ಚುನಾವಣೆ ವ್ಯವಸ್ಥಿತವಾಗಿ ನಡೆಯುವ ಉದ್ದೇಶದಿಂದ ಹೆಚ್ಚುವರಿಯಾಗಿ 4 ಮಂದಿಯನ್ನು ಆಯೋಗವು ನಿಯೋಜಿಸಲಿದೆ ಎಂದು ಗೋಪಾಲಸ್ವಾಮಿ ಹೇಳಿದರು.

ಮುಖ್ಯ ಆಯುಕ್ತರ ಜೊತೆ ಉಪ ಆಯುಕ್ತರಾದ ಖುರೇಷಿ ಮತ್ತು ನವೀನ್ ಬಿ. ಚಾವ್ಲಾರವರು ಆಗಮಿಸಿದ್ದು, ರಾಜ್ಯದಲ್ಲಿ ಚುನಾವಣಾ ಸಿದ್ಧತೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಪರಾಮರ್ಶೆ ನಡೆಸಿದರು.
ಮತ್ತಷ್ಟು
ಚುನಾವಣಾ ಆಯುಕ್ತರಿಗೆ ಬಿಜೆಪಿ, ಕಾಂಗ್ರೆಸ್ ಮನವಿ
ಬಿಜೆಪಿಯಿಂದ ಅಧಿಕಾರದ ಚುಕ್ಕಾಣಿ
ಅಕ್ರಮ ಗಣಿಗಾರಿಕೆ ; ಚುನಾವಣೆ ನಂತರ ಬಹಿರಂಗ
ಗೌಡರ ಕಾರಿಗೆ ಡಿಕ್ಕಿ ; ಆತ್ಮಹತ್ಯೆಗೆ ಶರಣು
ಸಾರಾಯಿ ನಿಷೇಧ ವಿಫಲ: ಬಿ.ಆರ್.ಪಾಟೀಲ್
ರೈಲ್ವೆ : ಕರವೇ ಬೆದರಿಕೆ, ದೈಹಿಕ ಪರೀಕ್ಷೆ ಸ್ಥಗಿತ