ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಲ್ಲಿ ನಾಳೆ ಯಕ್ಷವೈಭವ, ಕಲಾವಿದರಿಗೆ ಸನ್ಮಾನ
ರಾಜ್ಯದಲ್ಲಿಯೇ ಪ್ರಥಮವೆಂಬ ಹೆಮ್ಮೆ ಹೊತ್ತಿರುವ ಯಕ್ಷನೃತ್ಯ ವೈಭವ ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ನಗರದ ಪುರಭವನ ತೆರೆದುಕೊಳ್ಳಲಿದೆ.

ಅಗ್ನಿ ಸೇವಾ ಟ್ರಸ್ಟ್, ಯಕ್ಷಗಾನ ಯೋಗಕ್ಷೇಮ ಅಭಿಯಾನ ಹಾಗೂ ಯಕ್ಷಾಂಗಣ ಟ್ರಸ್ಟ್‌ಗಳ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಕ್ಷರಂಗದ ನಾರಿ ಎಂದೇ ಪ್ರಸಿದ್ಧಿ ಪಡೆದಿರುವ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಹಾಗೂ ಯಕ್ಷಗಾನದ ತಾಜಾ ಪ್ರತಿಭೆ ಅರ್ಪಿತಾ ಹೆಗಡೆಯವರ ನೃತ್ಯ ವೈಭವ ಅನಾವರಣಗೊಳ್ಳಲಿದೆ.

ಗುರು ಶಿಷ್ಯರ ಸಾಂಪ್ರದಾಯಿಕ ಜುಗಲ್ಬಂದಿ ಹಾಡುಗಾರಿಕೆ ಈ ಸಂದರ್ಭದಲ್ಲಿ ನಡೆಯಲಿರುವುದು ಮತ್ತೊಂದು ವಿಶೇಷ. ಗಣಪತಿ ಭಟ್ ಮತ್ತು ಪ್ರಸನ್ನಭಟ್ ಹಾಗೂ ಕೆ.ಪಿ.ಹೆಗಡೆ ಮತ್ತು ಸರ್ವೇಶ್ವರ್ ಮೂರೂರ್ ಇವರುಗಳ ವತಿಯಿಂದ ಯಕ್ಷಗಾನ ರಸಧಾರೆ ಎಂಬ ವಿಭಿನ್ನ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ಕುಂಬಾಶಿಯ ಕೊಂಡದಕುಳಿ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನವು ಧರ್ಮಾಂಗದ ದಿಗ್ವಿಜಯ ಮತ್ತು ರಾಜಾ ರುದ್ರಕೋಪ ಎಂಬ ಪೌರಾಣಿಕ ಯಕ್ಷಗಾನ ಕಾರ್ಯಕ್ರಮವನ್ನು ನಡೆಸಿಕೊಡಲಿದೆ. ಜೊತೆಗೆ ಹಿರಿಯ ಕಲಾವಿದರಾದ ಕೃಷ್ಣಮೂರ್ತಿ ತುಂಗ ಹಾಗೂ ಭಾಗವತರಾದ ಕೆ.ಪಿ.ಹೆಗಡೆ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿದುಬಂದಿದೆ.
ಮತ್ತಷ್ಟು
ಚುನಾವಣಾ ರಣನೀತಿ ರೂಪಿಸಲು ಜೆಡಿಎಸ್ ಸಭೆ
ಬೆಂಗಳೂರಲ್ಲಿ ಅರ್ಧಾಂಶ ಆಟೋ ಮುಷ್ಕರ
ಕಾನೂನು ಸುವ್ಯವಸ್ಥೆಗೆ ಸಕಲ ನೆರವು : ಠಾಕೂರ್
ಮೇ ತಿಂಗಳಲ್ಲಿ ಚುನಾವಣೆ- ಗೋಪಾಲಸ್ವಾಮಿ
ಚುನಾವಣಾ ಆಯುಕ್ತರಿಗೆ ಬಿಜೆಪಿ, ಕಾಂಗ್ರೆಸ್ ಮನವಿ
ಬಿಜೆಪಿಯಿಂದ ಅಧಿಕಾರದ ಚುಕ್ಕಾಣಿ