ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಕಾಶ್‌ ಪ್ರವೇಶಕ್ಕೆ ಅಡ್ಡಿಯಿಲ್ಲ : ಜನಾರ್ಧನ ರೆಡ್ಡಿ
ಜೆಡಿಎಸ್ ಬಂಡಾಯ ನಾಯಕ ಹಾಗೂ ಮಾಜಿ ಮಂತ್ರಿ ಎಂ.ಪಿ. ಪ್ರಕಾಶ್‌ರವರು ಬಿಜೆಪಿ ಸೇರುವುದಾದಲ್ಲಿ ಅದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಬಿಜೆಪಿ ನಾಯಕ ಜನಾರ್ಧನರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ ಬಿಜೆಪಿ ಅಲೆ ಎದ್ದಿರುವ ಇಂದಿನ ಸಂದರ್ಭದಲ್ಲಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಬರುವ ನಾಯಕರಿಗೆ ಎಂದಿಗೂ ಸ್ವಾಗತವಿದೆ. ಪ್ರಕಾಶರ ಬಿಜೆಪಿ ಸೇರ್ಪಡೆಗೆ ತಾವೆಂದೂ ತಕರಾರು ಮಾಡಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಕೆಲವೇ ದಿನಗಳ ಮುಂಚೆ ಕುಮಾರಸ್ವಾಮಿ ತುಂಬಾ ಆತುರವಾಗಿ ತಮಗೆ ಬೇಕಾದವರಿಗೆ ಗಣಿಗುತ್ತಿಗೆ ನೀಡಿದರು ಎಂದು ಆರೋಪಿಸಿದ ರೆಡ್ಡಿಯವರು ಈ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಶೀಘ್ರದಲ್ಲಿಯೇ ಮತ್ತೊಂದು ಅರ್ಜಿ ಸಲ್ಲಿಸುವುದಾಗಿ ನುಡಿದರು.

ಆಂಧ್ರಪ್ರದೇಶದ ಕಡಪಾದಲ್ಲಿ ತಾವು ಸ್ಥಾಪಿಸಿರುವ ಉಕ್ಕು ಉತ್ಪಾದನಾ ಘಟಕದಂತೆಯೇ ಕರ್ನಾಟಕದಲ್ಲೂ ಭಾರೀ ಉಕ್ಕು ಉತ್ಪಾದನಾ ಘಟಕ ಸ್ಥಾಪಿಸಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಕಟಣೆಯನ್ನೂ ಇದೇ ಸಂದರ್ಭದಲ್ಲಿ ರೆಡ್ಡಿ ಮಾಡಿದರು.
ಮತ್ತಷ್ಟು
ಕಬ್ಬಿಗೆ ಸೂಕ್ತ ಬೆಲೆ: ರಾಜಭವನಕ್ಕೆ ರೈತರಿಂದ ಮುತ್ತಿಗೆ
ಸ್ಪೋಟದ ಬೆದರಿಕೆ; ಇಂಜಿನಿಯರ್ ಬಂಧನ
ಬೆಂಗಳೂರಲ್ಲಿ ನಾಳೆ ಯಕ್ಷವೈಭವ, ಕಲಾವಿದರಿಗೆ ಸನ್ಮಾನ
ಚುನಾವಣಾ ರಣನೀತಿ ರೂಪಿಸಲು ಜೆಡಿಎಸ್ ಸಭೆ
ಬೆಂಗಳೂರಲ್ಲಿ ಅರ್ಧಾಂಶ ಆಟೋ ಮುಷ್ಕರ
ಕಾನೂನು ಸುವ್ಯವಸ್ಥೆಗೆ ಸಕಲ ನೆರವು : ಠಾಕೂರ್