ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧಿವೇಶನಗಳು ಜನವಿರೋಧಿ ಕೇಂದ್ರಗಳು: ಕೃಷ್ಣ
ವಿಷಯಾಧರಿತ ಚರ್ಚಾಕೇಂದ್ರವಾಗಬೇಕಿದ್ದ ಲೋಕಸಭಾ ಮತ್ತು ವಿಧಾನಸಭಾ ಕಾರ್ಯಕಲಾಪಗಳು ಗಲಾಟೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ವಿಧಾನ ಸಭಾಧ್ಯಕ್ಷ ಕೃಷ್ಣ ವಿಷಾದ ವ್ಯಕ್ತಪಡಿಸಿದ್ದಾರೆ.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕಲಾಪಗಳು ನಡೆಯುತ್ತಿರುವ ಧಾಟಿ ಜನರಿಗೆ ವಾಕರಿಕೆ ತರಿಸುತ್ತಿದೆ. ಜನರ ನೋವು-ನಲಿವುಗಳಿಗೆ ಸ್ಪಂದಿಸುವುದಕ್ಕೆ ಬದಲಾಗಿ ಸದಸ್ಯರು ಒಣ ಪ್ರತಿಷ್ಠೆಗಾಗಿ ಧರಣಿ-ಸಭಾತ್ಯಾಗ ಮಾಡುತ್ತಿರುವುದು ಜನರಲ್ಲಿ ಬೇಸರ ಹುಟ್ಟಿಸಿದೆ ಎಂದು ಅಭಿಪ್ರಾಯಪಟ್ಟ ಕೃಷ್ಣ ಇದೊಂದು ಅತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕೆ ಹೋರಾಟ ಮಾಡುವ ಮನೋಭಾವವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು ಮೂಡಿಸಿಕೊಂಡರೆ ಸಾಧನೆ ಸಾಧ್ಯ. ಆದ್ದರಿಂದ ನೀವೆಲ್ಲಾ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕೃಷ್ಣ ಕರೆ ನೀಡಿದರು.
ಮತ್ತಷ್ಟು
ಕರವೇ ಕಾರ್ಯಕರ್ತರಿಂದ ರೈಲು ನಿಲ್ದಾಣಕ್ಕೆ ಮುತ್ತಿಗೆ
ಪ್ರಕಾಶ್‌ ಪ್ರವೇಶಕ್ಕೆ ಅಡ್ಡಿಯಿಲ್ಲ : ಜನಾರ್ಧನ ರೆಡ್ಡಿ
ಕಬ್ಬಿಗೆ ಸೂಕ್ತ ಬೆಲೆ: ರಾಜಭವನಕ್ಕೆ ರೈತರಿಂದ ಮುತ್ತಿಗೆ
ಸ್ಪೋಟದ ಬೆದರಿಕೆ; ಇಂಜಿನಿಯರ್ ಬಂಧನ
ಬೆಂಗಳೂರಲ್ಲಿ ನಾಳೆ ಯಕ್ಷವೈಭವ, ಕಲಾವಿದರಿಗೆ ಸನ್ಮಾನ
ಚುನಾವಣಾ ರಣನೀತಿ ರೂಪಿಸಲು ಜೆಡಿಎಸ್ ಸಭೆ